ಆಗಾಗ ಎದುರು ಸಿಕ್ಕಾಗ ಮಾತು ಬರದೇ ಸುಮ್ಮನೇ ನಿಂತವರು, ಬಸ್ಸಿನಲ್ಲೋ, ಬೀದಿಯ ತುದಿಯಲ್ಲೋ ನಿಮ್ಮ ಕಣ್ಣನ್ನು ಸೆರೆಹಿಡಿದಿರುವ ಆ ಹುಡುಗ/ಹುಡುಗಿ ಗೆ ಒಂದಿಷ್ಟು ಅಕ್ಷರ ರೂಪದಲ್ಲಿ ಹೇಳಬೇಕೆನ್ನಿಸಿದರೆ; ಜಾತಿ-ಧರ್ಮದ ಹೆಸರಲ್ಲಿ ನಮ್ಮನ್ನ ಒಡೆಯುವ ಮಾಧ್ಯಮಗಳ ಬಗ್ಗೆ ಅಸಮಾಧಾನ ವ್ಯಕ್ತಪಡಿಸಬೇಕಿದ್ದರೆ; ಸುರಿವ ಮಳೆ, ಬೀಸೋ ಗಾಳಿ, ಸುಡುವ ಬಿಸಿಲು, ಇದೆಲ್ಲದರ ಬಗ್ಗೆ ಮನಸ್ಸಿಗೆ ಬಂದದ್ದು ಪದರೂಪಕ್ಕೆ ಇಳಿಸಬೇಕೆಂದರೆ; ಮೊನ್ನೆ ತಾನೇ ಓದಿದ ವಿಜ್ಞಾನದ ಲೇಖನವೊಂದರ ಬಗ್ಗೆ ಸಣ್ಣದಾಗಿ ಟಿಪ್ಪಣಿ ಬರೆಯಬೇಕೆಂಬ ಆಸೆ ಇದ್ದರೆ; ನೆಚ್ಚಿನ ಕ್ರೀಡಾಪಟುವಿನ ಬಗ್ಗೆ ಒಂದಿಷ್ಟು ಸಾಲು, ಹಾಡಿನಲ್ಲೇ ಹಳೆಯ ನೆನಪನೆಲ್ಲಾ ಮೆಲುಕು ಹಾಕುವಂತೆ ಮಾಡೋ ಆ ಪಿಬಿ ಶ್ರೀನಿವಾಸ್,ಜಾನಕಿ, ಕಿಶೋರ್, ಆಶಾ, ಲತಾರ ಬಗ್ಗೆಯೋ, ಇಲ್ಲದಿರುವ ಪ್ರೇಯಸಿಯನ್ನೋ/ಪ್ರಿಯಕರನನ್ನೋ ನೆನಸುವಂತೆ ಮಾಡೋ ಅರ್ಜಿತ್, ಶ್ರೇಯಾ, ವಿಜಯ್ ಪ್ರಕಾಶ್ ರವರೆಲ್ಲರ ಬಗ್ಗೆಯೋ ಒಂದಿಷ್ಟು ತೋಚಿದ್ದು ಗೀಚುವ ಮನವಾದರೆ, ಅಥವಾ ಸುಮ್ಮನೆ ಕೂತಾಗ ಏನಾದರೂ ಬರೆಯಬೇಕೆಂಬ ಬಯಕೆಯಾದರೆ, ಬರೆಯಿರಿ! ಬರ್ದು ನಮ್ಮ ಈ ಕೆಳಕಂಡ ವಿಳಾಸಕ್ಕೆ ಮೇಲ್ ಕಳುಹಿಸಿ. ಕನ್ನಡ ಅಥವಾ ಇಂಗ್ಲೀಷ್ ನಲ್ಲಿದ್ದ್ರೆ ಒಳ್ಳೇದು! ನಿಮ್ಮ ಭಾವನೆಗಳಿಗೆ ವೇದಿಕೆಯಾಗೋ ಹೆಮ್ಮೆಯನ್ನ ನಮ್ಮ ಪಾಲಿಗೆ ಬಿಡಿ!

ಜೊತೆಗೆ ಕೆಳಕಂಡ ವಿಷ್ಯಗಳನ್ನ, ನಿಮ್ಮ ಲೇಖನದ ಜೊತೆ ತಿಳಿಸಿ,

ಹೆಸರು,
ನಿಮ್ಮ ಬಗ್ಗೆ ಒಂದಿಷ್ಟು ವಿವರಿಸಿಕೊಳ್ಳಿ, ನಿಮ್ ಬಗ್ಗೆ ನೀವೇ ಹೊಗ್ಳೋದಕ್ಕೆ ನಾಚ್ಕೆ ಆದ್ರೆ ನಿಮ್ಮ ಆಪ್ತರ ಬಳಿ ಹೇಳಿ ಬರ್ಸಿಕೊಂಡು ಕಳ್ಸಿ.

ಲೇಖನದ ಶೀರ್ಷಿಕೆ, ಸಂಬಂಧ ಪಟ್ಟ ಛಾಯಾಚಿತ್ರವಿದ್ರೆ ದಯವಿಟ್ಟು ಕಳುಹಿಸಿ, ನಿಮ್ಮ ಲೇಖನಕ್ಕೆ ನಿಮ್ಮದೇ ಆಯ್ಕೆಯ ಶೀರ್ಷಿಕೆ ಹಾಗೂ ಛಾಯಾಚಿತ್ರ ಇರಬೇಕೆಂಬುದು ನಮ್ಮ ಅಭಿಪ್ರಾಯ.

ನಮ್ಮ ವಿಳಾಸ: neevubareyiri@issani.co.in