ನಾ ಅರಿಯದ ನೋವು

Posted by ಆದರ್ಶ on 17-Dec-2016
ಮರವೊಂದು ಬಳ್ಳಿಯಿಂದ ಬೇರಾಗಬಂದಾಗ
ಬಳ್ಳಿಯು ದೂರ ಸರಿದು ಮತ್ತೆಲ್ಲೋ ನಿಲ್ಲಬೇಕಾಗ,
ಮರದ ಮನದಲ್ಲಿ, ಬಳ್ಳಿಯ ಒಡಲಲ್ಲಿ ಮೂಡಿಬಂದದ್ದು ನಾ; ಅರಿಯದಂಥ ನೋವು!

ಮರಿಯೊಂದು ಗೂಡನ್ನು ತೊರೆದು ಬರುವಾಗ
ತಾಯಿಯು ಕಂಬನಿ ಸುರಿಸಿ ನೋಡುತಿರುವಾಗ
ಮರಿಯ ಭಯದಲ್ಲಿ, ತಾಯಿಯ ಕರುಳಲ್ಲಿ ಬೆರೆತುಬಂದದ್ದು ನಾ; ಅರಿಯದಂಥ ನೋವು!

ಬೆಳೆದು ಬಂದ ಹಾದಿಯ ಜಾಡನ್ನು ತಾನೇ ಅಳಿಸಿ
ಕಾಣದ ಹೊಸ ಹಾದಿಯ ಸೊಗಸನ್ನು ಅರಸಿ
ನಡೆದಿದ್ದ ಹಾದಿಯ ನೆನಪಲ್ಲಿ, ಕಾಣದಂಥ ಹಾದಿಯ ಮೆರುಗಲ್ಲಿ; ಇರುವುದು ನಾ ಅರಿಯದಂಥ ನೋವು!


ಇಷ್ಟ ಆದ್ರೆ Like ಮಾಡಿ ನಮ್ಮನ್ನು ಪ್ರೋತ್ಸಾಹಿಸಿ...