ನನ್ನೊಳಗೆ ನೀನೇ ಇಲ್ಲ...!

Posted by ಶ್ರೀಕೇತ್ on 12-Jan-2017
ನಂಗಿಷ್ಟು ಸಾಕು ಗೆಳತಿ ನಾ ನಿನ್ನಿಂದ ದೂರಾಗಲು...!! ನೀ ಸ್ವಾರ್ಥಿ ... ನಂಗೆ ಗೊತ್ತಾಗೋಕೆ ಇಷ್ಟು ದಿನ ಬೇಕಾಯ್ತು.. ಹೌದು, ತಪ್ಪೆಲ್ಲ ನಂದೇನೆ!! ಯಾಕಂದ್ರೆ ನಾನೆ ತಾನೆ ನಿನ್ನ ಹಿಂದೆ ಬಂದಿದ್ದು. ನೀ reply ಮಾಡ್ದಿದ್ರು ನಿನ್ನ number ಗೆ 'good night, good morning...' message ಕಳ್ಸಿ ನಿಂಜೊತೆ ಗೆಳೆತನ ಮಾಡಿದ್ದು..... ನೀನು ನನ್ನ ಸಂದೇಶ ಓದಿ ಸಂಶಯದ ಮಾತಾಡಿದಾಗ್ಲೆ ನಾ ನಿನ್ನ ಅರ್ಥ ಮಾಡ್ಕೊಂಡಿದ್ರೆ ನಾನಿವತ್ತು ಕಳೆದು ಹೋದ ನಿನ್ನನ್ನು ನನ್ನೊಳಗೆ ಹುಡುಕಾಡುವ ಹುಚ್ಚ ಆಗ್ತಿರ್ಲಿಲ್ಲ....

ಈಗ- ನೀನು ಹೋದ್ಮೇಲೆ, ನನ್ನ life ಸಕ್ಕತ್ತಾಗಿದೆ ಕಣೆ,, ಎದ್ರು ಯಾವ್ದಾದ್ರು ಚನ್ನಾಗಿರೋ ಹುಡ್ಗಿ ಬಂದ್ರೆ- ಅವ್ಳ ಕಡೆ ತಿರುಗಿ ನೋಡ್ಬೇಕು ಅಂತಾನು ಅನ್ನಿಸ್ತಿಲ್ಲ... ಯಾಕಂದ್ರೆ ಅವ್ಳು ನೀನಲ್ಲ ಅಂತ ನಂಗೊತ್ತು!!!,

ಮತ್ತೆ ಮತ್ತೆ ನಿಂಗೆ phone ಮಾಡಿ ಮಾತಾಡ್ಬೇಕು ಅನ್ನೋ 'ಚಟ' ಕೂಡ ಈಗ ನನ್ನಲ್ಲಿಲ್ಲ. ಅದೆಷ್ತು ಸುಲಬವಾಗಿ ನನ್ನಿಂದ ದೂರಾದೆ ನೀನು, ನಂಗೆ ನಂಬೋಕೆ ಆಗ್ತಿಲ್ಲ... ನೀನು ಹೋದ್ಮೇಲೆ ನಾನು ಒಬ್ನೆ ಇರೋದನ್ನ ಕಲ್ತಿದಿನಿ... ಈಗ ನಂಗೆ ಯಾರ ಹಂಗಿಲ್ಲ,, ನೀನಾಡಿದ ಪದಗಳ ಗುಂಗಿಲ್ಲ... ಹಗಲು ಕನಸುಗಳ ಹುಚ್ಚಾಟವಿಲ್ಲ........ ಎಲ್ಲಕ್ಕಿಂತ ಹೆಚ್ಚಾಗಿ ನನ್ನೊಳಗೆ ನೀನೆ ಇಲ್ಲ..!! ಜೀವನ ಈಗಷ್ಟೆ 'restore factory setting' complete ಮಾಡಿ restart ಆಗಿದೆ....

ನೀನು ನನ್ನವಳಲ್ಲ ಅನ್ನೋ ವಿಷಯ ನನ್ನ ಮೆದುಳಿಗೆ ಅರ್ಥವಾಗಿದೆ, ಆದರೂ ಈ ಹ್ರುದಯ ಸತ್ಯವನ್ನು ಒಪ್ಪಿಕೊಳ್ಳುತ್ತಿಲ್ಲ!! ಪಾಪ, ಅದರದೇನೂ ತಪ್ಪಿಲ್ಲ ಬಿಡು, ನೀನು ಆಡಿದ ಮಾತುಗಳನ್ನು ನನ್ನ ಪ್ರತಿ ರಕ್ತದ ಕಣ ಜಪಿಸುತ್ತಿರುವಾಗ ಹ್ರುದಯ ನಿನ್ನ ಪಟಿಸುವುದರಲ್ಲಿ ತಪ್ಪೇನಿದೆ?

ಸುಮಾರು ೩ ವಸಂತದ ಹಿಂದೆ, ಆ ಗುಡ್ಡದ ಆಂಜನೇಯನ ಎದುರು ನೀನು ನನ್ನ ಅರ್ದಾಂಗಿಯೆಂದು ನನ್ನ ಹ್ರುದಯಕ್ಕೆ ಒಪ್ಪಿಸಿ, ನಿನ್ನ ನವಿರಾದ ಕೈ ಬೆರಳುಗಳಿಗೆ ಉಂಗುರ ತೊಡಿಸಿ, ಮಗುವಂತೆ ನಿನ್ನನ್ನು ನನ್ನ ಎದೆಗಪ್ಪಿಕೊಂಡು, ಆ ನಿನ್ನ ಹಣೆಗೆ ಚುಂಬಿಸಿದ್ದೆ.‌.‌‌.

ಸುಮ್ಮನೆ ಹೇಳಿದ ಮಾತುಗಳಿಗೆ ಕಿವಿಗೊಟ್ಟು, ಚಾಕುವಿನಿಂದ ನನ್ನ ಹೆಸರನ್ನು ಕೈ ಮೇಲೆ ಬರೆದುಕೊಂಡೆಯಲ್ಲ ಅವತ್ತಿಂದ ನಾನು ನನ್ನ ಜೀವಕ್ಕಿಂತ ಹೆಚ್ಚು ನಿನ್ನ ಪ್ರೀತಿಸುತ್ತಿದ್ದೇನೆ. ಪ್ರೀತಿಸುತ್ತಲೇ ಇರುತ್ತೇನೆ... ಉಸಿರು ನಿಲ್ಲುವವರೆಗೂ.‌..‌.

ಅಪ್ಪ-ಅಮ್ಮ-ಅಣ್ಣ ನ ಕಾರಣ ಹೇಳಿ ನನ್ನಿಂದ ದೂರಾದೆಯಲ್ಲ, ನೀನೇ ಯೋಚಿಸು- ನಿನ್ನ ಅಪ್ಪ-ಅಮ್ಮನಿಗೆ ಹೇಳದೆ ನನ್ನನ್ನು ಪ್ರೀತಿಸಿದೆ ಅಂದರೆ ನೀನು ಅವರಿಗೆ ಒಳ್ಳೆಯ ಮಗಳಾಗಲಿಲ್ಲ! ನಿನ್ನ ಅಣ್ಣನಿಗೆ ಒಳ್ಳೆಯ ತಂಗಿಯಾಗಲಿಲ್ಲ! ಇನ್ನು ನನಗೆ ಒಳ್ಳೆಯ ಪ್ರಿಯತಮೆಯಾಗಲಿಲ್ಲ!! ನನ್ನವಳಾಗುವೆ ಎಂದು ಹೇಗೆ ನಂಬಲಿ ನಿನ್ನ ??

ಪ್ರೀತಿಯ ನಾಟಕವಾಡಿ, ನನ್ನೊಳಗಿದ್ದ ಕಲ್ಮಷವನ್ನೆಲ್ಲ ತೊಳೆದುದ್ದಕ್ಕೆ ಧನ್ಯವಾದಗಳು!! ಮತ್ತೆಂದೂ ಬರದಿರು, ನಿನ್ನ ನೆನಪುಗಳು ನಿನಗಿಂತ ಹಿತವಾವಿವೆ..

-ನಿನ್ನವ


ಇಷ್ಟ ಆದ್ರೆ Like ಮಾಡಿ ನಮ್ಮನ್ನು ಪ್ರೋತ್ಸಾಹಿಸಿ...