ಮೂರು ಮುಷ್ಟಿ ಒಲವು...!

Posted by ಶ್ರೀನಿಧಿ ವಿ.ನಾ. on 16-Jan-2017
ಬಿಗಿದಿಟ್ಟ ಉಸಿರನ್ನು ಒಮ್ಮೆಲೆ
ಹೊರಹಾಕಿ, ಕಿವಿಯ ತುದಿಗೆ
ತುಟಿಯನೊತ್ತಿ ನಿನ್ನ ಹೆಸರನು
ಪಿಸುಗುಟ್ಟಿ, ನಾ ನಗುವಾಗ ಸಂಜೆ!

ಕಂಪಿಸುವ ನಿನ್ನ ಬೆರಳುಗಳ,
ಅಂಗೈಯೊಳಗೆ ಬಚ್ಚಿಟ್ಟು,
ಬೆನ್ನುತಬ್ಬಿ ಮುದ್ದಾಡುವಾಗ
ಕಣ್ಣಂಚಲ್ಲಿ ಮಿನುಗುವುದು ಕಣ್ಣೀರಾ?!

ಮಂದಾಹಾಸದಲ್ಲಿ ಓರೆಯಾದ
ನಿನ್ನ ತುಟಿಗೆ ಬೆರಳೊತ್ತಿ,
ಚಂದ್ರ ತಂದ ಈ ರಾತ್ರಿ ನಿಜವೆಂದು
ನಂಬಿಸಿದೆ ಮನಕೆ, ನಾ ಅಲ್ಪತೃಪ್ತಿ!


ಇಷ್ಟ ಆದ್ರೆ Like ಮಾಡಿ ನಮ್ಮನ್ನು ಪ್ರೋತ್ಸಾಹಿಸಿ...