ಮರುನುಡಿ

Posted by ಸಹನಾ ಕಾರಂತ್ on 18-Jan-2017
ತೂಗಿ ಕೊಡು ನನಗೆ ನಿನ್ನಯ ಮೌನ
ಕೇಳಬೇಕಿದೆ ಅಲ್ಲಿ, ನನ್ನ ಪ್ರತಿಧ್ವನಿ
ಹುಡುಕಬೇಕಿದೆ ನಾನು, ನಿನ್ನ ಮರುನುಡಿ
ಅರಿಯಬೇಕಿದೆ ನಿನ್ನ , ತೂಗಿಕೊಡು ನಿನ್ನಯ ಮೌನ

ಕಲಿಯಬೇಕಿದೆ ಹೊಸದಾಗಿ ನಾ ಮಾತು,
ನಿನ್ನೊಂದಿಗೆ ಸಂಭಾಷಣೆ ನಡೆಸಲು
ಬೇಕಿದೆ ನನ್ನ ಪ್ರಶ್ನೆಗೆ ಉತ್ತರ
ಶೋಧಿಸುವೆ ಮನದಾಳ, ತೂಗಿಕೊಡು ನಿನ್ನಯ ಮೌನ

ಪಿಸುಗುಡಬೇಕಿದೆ ನೀನು ಕತ್ತಲ ಮರೆತು,
ನಗಬೇಕಿದೆ, ಸೋಲಿಸಲು ನನ್ನ ಮತ್ತೊಮ್ಮೆ
ಹೊಗಳಬೇಕಿದೆ ನನ್ನ , ಕವಿಯಾದ ಪರಿಗೆ
ಮಾತಾಡು ಸಾಕು, ಪೂರ್ತಿ ಕೊಡು ನಿನ್ನಯ ಮೌನ


ಇಷ್ಟ ಆದ್ರೆ Like ಮಾಡಿ ನಮ್ಮನ್ನು ಪ್ರೋತ್ಸಾಹಿಸಿ...