ಚಾಚಾಜಿ ಸ್ವಾರ್ಥಕ್ಕೆ ಬಲಿಯಾದರೇ ನೇತಾಜಿ???

Posted by ಅರ್ಜುನ್ ದೇವಾಲದಕೆರೆ on 23-Jan-2017
ಭಾರತ ಸ್ವತಂತ್ರ ಸಂಗ್ರಾಮದ ಕಥೆಯೇ ರೋಚಕ. ಅಲ್ಲಿ ಏನುಂಟು ಏನಿಲ್ಲಾ, ಅಲ್ಲಿ ಬಲಿದಾನವಿದೆ, ವೀರವನಿತೆಯರ ತ್ಯಾಗಗಳಿವೆ. ಅದೆಷ್ಟೋ ಯುವಕರ ಮೀಸೆ ಚಿಗುರುವ ಮುನ್ನವೇ ನೆತ್ತರು ನೆಲಸೇರಿದ ಉದಾಹರಣೆಗಳಿವೆ, ಲೆಕ್ಕವಿಲ್ಲದಷ್ಟು ಮಕ್ಕಳು ಅನಾಥರಾದ ಸಾಕ್ಷಿಗಳಿವೆ. ಆದರೆ ವಿಪರ್ಯಾಸವೆಂದರೆ ಇಂದಿನ ಪೀಳಿಗೆ ಓದುತ್ತಿರುವ ಭಾರತೀಯ ಇತಿಹಾಸದಲ್ಲಿ ಅವರುಗಳ ಹೆಸರುಗಳೇ ಇಲ್ಲ. ಇದಕ್ಕೆ ಎರಡು ಪ್ರಮುಖ ಕಾರಣಗಳಿವೆ. ತಮ್ಮ ಮೇಲೆ ಪ್ರಾಬಲ್ಯ ಮೆರೆದ ಸ್ವತಂತ್ರ ಹೋರಾಟಗಾರರನ್ನು ಇತಿಹಾಸದಲ್ಲಿ ಉಲ್ಲೇಖಿಸಿದರೆ ನಮ್ಮ ಘನತೆಗೆ ಕುಂದು ಬರುತ್ತದೆಯೆಂದು ನಂಬಿದ್ದ ದೂರ್ತ ಬ್ರಿಟೀಷರು ಮತ್ತು ನಿಜವಾದ ಸ್ವತಂತ್ರ ಹೋರಾಟಗಾರರನ್ನು ಇತಿಹಾಸದ ಪುಟಗಳಲ್ಲಿ ಸೇರಿಸಿದರೆ ತಾವುಗಳು ದುರ್ಬಲ ನಾಯಕರುಗಳೆಂದು ಋಜುವಾಗುತ್ತದೆಂದು ಅರಿತಿದ್ದ ಸ್ವತಂತ್ರ ನಂತರದ ಸೋಗಲಾಡಿ ಸ್ವಾರ್ಥಿ ನಾಯಕರುಗಳು. ಇವುರುಗಳಿಂದಾಗಿ ಇಂದಿಗೂ ಭಾರತೀಯ ಇತಿಹಾಸ, ಬಟ್ಟೆ ಬಿಚ್ಚಿ ತಿರುಗಿದವರನೆಲ್ಲಾ ಸ್ವತಂತ್ರ ಹೋರಾಟಗಾರರು, ಕಾಮಾಂಧರನ್ನೆಲ್ಲಾ ಪ್ರೇಮಮೂರ್ತಿಗಳು, ಮತಾಂಧರನೆಲ್ಲಾ ನಾಡ ಹುಲಿಗಳು ಎಂದು ಬಿಂಬಿಸುವಲ್ಲಿಗಷ್ಟೇ ಸೀಮಿತವಾಗಿದೆ. ಅಂತಹ ಇತಿಹಾಸ ಹೇಳಿದ ಮತ್ತು ಮೊನ್ನೆ ಪಶ್ಚಿಮ ಬಂಗಾಳ ಸರ್ಕಾರ ದಾಖಲೆ ಸಮೇತ ದೃಢಪಡಿಸುವವರೆಗೂ ಚಾಲ್ತಿಯಲ್ಲಿದ್ದ ಅತಿ ದೊಡ್ಡ ಸುಳ್ಳೆಂದರೆ, ಭಾರತೀಯ ಸ್ವಾತಂತ್ರ ಸಂಗ್ರಾಮದ ನಿಜವಾದ ನಾಯಕ, ನೇತಾಜಿ ಸುಭಾಷ್ ಚಂದ್ರ ಭೋಸ್ ತೈಪೈ ವಿಮಾನ ದುರಂತದಲ್ಲಿ 1945ರಲ್ಲಿ ಅಸುನೀಗಿದರೆಂಬುದು.
1947ರಲ್ಲಿ ಬ್ರಿಟೀಷರು ಭಾರತ ಬಿಟ್ಟು ತೊಲಗಲು, ನಮ್ಮ ಇತಿಹಾಸದಲ್ಲೆಲ್ಲೂ ದಾಖಲಾಗದ ಎರಡು ಪ್ರಮುಖ ಕಾರಣಗಳಿವೆ. ಎರಡನೇ ಮಹಾಯುದ್ಧದಿಂದಾಗಿ ತೀವ್ರ ಆರ್ಥಿಕ ನಷ್ಟಹೊಂದಿದ್ದ ಬ್ರಿಟನ್ ಸರ್ಕಾರ, ಭಾರತವನ್ನಾಳುತ್ತಿದ್ದ ಈಸ್ಟ್ ಇಂಡಿಯಾ ಕಂಪೆನಿಗೆ ಹಣಕಾಸಿನ ನೆರವು ನಿಲ್ಲಿಸಿ , ಕಂಪೆನಿ ಮುಂದುವರಿಸುವುದಾದಲ್ಲಿ ಭಾರತದಲ್ಲೇ ಕಂದಾಯ ವಸೂಲಿಮಾಡಿ ಅಧಿಕಾರ ನೆಡೆಸುವಂತೆ ಸೂಚಿಸುತ್ತದೆ. ಆದರೆ ಭಾರತೀಯರಾಗಲೇ ಕಂದಾಯ ಕೊಡುವುದನ್ನು ನಿಲ್ಲಿಸಿ ವರ್ಷಗಳೇ ಕಳೆದಿದ್ದರಿಂದ, ಈಸ್ಟ್ ಇಂಡಿಯಾ ಕಂಪೆನಿಗೆ ತನ್ನ ಸೈನಿಕರಿಗೆ ವೇತನ ಕೊಡುವುದು ಕೂಡ ಕಷ್ಟವಾಗಿ ಭಾರತದಿಂದ ಹೊರನಡೆಯಬೇಕಾದ ಅನಿವಾರ್ಯ ಸ್ಥಿತಿ ನಿರ್ಮಾಣ ವಾಗುತ್ತದೆ. ಇದು ಮೊದಲನೆ ಕಾರಣವಾದರೆ. ಎರಡನೆ ಬಹುಮುಖ್ಯ ಕಾರಣ ಆಜಾದ್ ಹಿಂದ್ ಫೌಜ್ ಅಥವಾ ಇಂಡಿಯನ್ ನ್ಯಾಷನಲ್ ಆರ್ಮಿ. 1940ರ ವೇಳೆಗೆ ಅಂದಿನ ಭಾರತೀಯ ಯುವಕರಿಗೆ, ಅಹಿಂಸೆ ಮತ್ತು ಸತ್ಯಾಗ್ರಹದಿಂದ ದೇಶಕ್ಕೆ ಸ್ವಾತಂತ್ರ್ಯದೊರಕುವುದು ಅಸಾಧ್ಯವೆಂದು ಅರಿವಾಗಿ, ಬ್ರಿಟೀಷರನ್ನು ಅವರ ಶೈಲಿಯಲ್ಲಿಯೇ ಎದುರಿಸಲು ಅವಕಾಶಕ್ಕಾಗಿ ಎದುರು ನೋಡುತ್ತಿದ್ದಾಗ ಬಂಗಾಳದ ಹುಲಿಯೊಂದು , ನನಗೆ ನಿಮ್ಮ ರಕ್ತಕೊಡಿ ನಾನು ನಿಮಗೆ ಸ್ವಾತಂತ್ರ್ಯ ಕೊಡಿಸುತ್ತೇನೆ ಎಂದು ಘರ್ಜಿಸುತ್ತದೆ. ಇದುವರೆವಿಗೂ ಕೇವಲ ಸೋಗಲಾಡಿ ನಾಯಕರನ್ನು ನೋಡಿದ್ದ ಜನತೆಗೆ ಮೊದಲ ಬಾರಿಗೆ ಒಬ್ಬ ಎಂಟೆದೆಯ ನಾಯಕನ ಪರಿಚಯವಾಗುತ್ತದೆ. ಆತನ ದೇಶದ ಮೇಲಿನ ಪ್ರೇಮಕ್ಕೇ ಅಂದಿನ ಯುವಕರು ಮಾರು ಹೋಗಿ ಸಾಗರೋಪಾದಿಯಲ್ಲಿ, ಆತ ಬ್ರಿಟೀಷರ ವಿರುದ್ಧ ಹೋರಾಡಲು ಕಟ್ಟಿದ ಆಜಾದ್ ಹಿಂದ್ ಫೌಜ್ ಸೇರಿ ಬ್ರೀಟೀಷರ ಮಾರಣ ಹೋಮಕ್ಕೆ ಕೈ ಹಾಕುತ್ತಾರೆ. ೧೯೪೨ರಲ್ಲಿ ಆಜಾದ್ ಹಿಂದ್ ಫ಼ೌಜ್ ನ ಸೈನಿಕರು ೭೦೦ ಬ್ರಿಟೀಷರನ್ನು ಕೊಂದಿದ್ದನ್ನು ಇಲ್ಲಿ ಸ್ಮರಿಸಬಹುದು. ಒಂದೆಡೆ ಆರ್ಥಿಕ ಸಂಕಷ್ಟದಿಂದ ಕಂಗೆಟ್ಟಿದ್ದ ಈಸ್ಟ್ ಇಂಡಿಯಾ ಕಂಪೆನಿಗೆ ಇದು ದೊಡ್ಡ ಹೊಡೆತ ನೀಡುತ್ತದೆ. ಭಾರತೀಯರ ರಕ್ತದಲ್ಲಿ ಓಕುಳಿಯಾಡುತ್ತಿದ್ದವರಿಗೆ, ತಮ್ಮವರ ರಕ್ತ ಭಾರತದ ನೆಲ ತೋಯಿಸಿದಾಗ ಪ್ರಾಣ ಭಯ ಆವರಿಸುತ್ತದೆ. ಇವೆಲ್ಲದರ ಪರಿಣಾಮವೇ 1947 ಆಗಸ್ಟ್. 15ರ ಸ್ವಾತಂತ್ರ್ಯ. .
ಭಾರತೀಯ ಸ್ವತಂತ್ರ ಸಂಗ್ರಾಮದಲ್ಲಿ ಸುಭಾಷ್ ರದ್ದು ಬಹು ದೊಡ್ಡ ಹೆಸರು. ಜನತೆಗೆ ಜೈ ಹಿಂದ್ ಪದ ಪರಿಚಯಿಸಿದವರು, ಗಾಂಧೀಜಿಯನ್ನು ’ಫ಼ಾದರ್ ಆಫ಼್ ನೇಷನ್’ ಎಂದವರು ಇವರೆ. 1897 ಜನವರಿ 23ರಂದು ಕಟಕ್ ನಲ್ಲಿ ಜನಿಸಿದ ಸುಭಾಷ್, 1918ರಲ್ಲಿ ಕಲ್ಕತ್ತಾ ವಿಶ್ವವಿದ್ಯಾಲಯದಿಂದ ರಾಜಕೀಯ ಶಾಸ್ತ್ರ ದಲ್ಲಿ ಪದವಿ ಪಡೆದು, ತಂದೆಯ ಆಶಯದಂತೆ 1919ರಲ್ಲಿ ಇಂಡಿಯನ್ ಸಿವಿಲ್ ಸರ್ವೀಸ್ ಪಾಸ್ ಮಾಡಿ ಬ್ರಿಟೀಷ್ ಸರ್ಕಾರದಲ್ಲಿ ಕೆಲಸ ಗಿಟ್ಟಿಸುತ್ತಾರೆ. ಅಂದಿನ ಕಾಲಕ್ಕೆ ಇಂಡಿಯನ್ ಸಿವಿಲ್ ಸರ್ವೀಸ್ ಪಾಸ್ ಮಾಡಿ ಬ್ರಿಟೀಷ್ ಸರ್ಕಾರದಲ್ಲಿ ಕೆಲಸ ಗಿಟ್ಟಿಸುವುದೇ ಕಷ್ಟವಾಗಿದ್ದಾಗ, 1921ರಲ್ಲಿ ಸುಭಾಷ್ ನನ್ನ ದೇಶವನ್ನು ದಾಸ್ಯದ ಕೂಪಕ್ಕೆ ತಳ್ಳಿರುವವರ ಕೈ ಕೆಳಗೆ ದುಡಿಯುವುದಿಲ್ಲವೆಂದು ಕೆಲಸಕ್ಕೆ ರಾಜೀನಾಮೆ ನೀಡಿ ಭಾರತಕ್ಕೆ ಹಿಂದಿರುಗುತ್ತಾರೆ. ಭಾರತಕ್ಕೆ ಮರಳಿದ ತಕ್ಷಣವೇ ಸ್ವರಾಜ್ ಎಂಬ ಪತ್ರಿಕೆ ಪ್ರ್ರಾರಂಭಿಸಿದ ಸುಭಾಷ್ ನೇರವಾಗಿ ಸ್ವಾತಂತ್ರ್ಯ ಸಂಗ್ರಾಮಕ್ಕೆ ಧುಮುಕ್ಕುತ್ತಾರೆ. ಅವರ ನೇರ ನುಡಿ ಮತ್ತು ಕ್ರಾಂತಿಕಾರಿ ವಿಚಾರಧಾರೆಗಳಿಂದ ಬಹುಬೇಗ ಜನಮಾನಸಕ್ಕೆ ಹತ್ತಿರವಾದ ಸುಭಾಷ್ ಜನನಾಯಕರಾಗಿ ಬೆಳೆಯುತ್ತಾರೆ.
1923ರಲ್ಲಿ ಆಲ್ ಇಂಡಿಯ ಯೂಥ್ ಕಾಂಗ್ರೆಸ್ಸ್ ನ ಅಧ್ಯಕ್ಷರಾಗಿ ಅಧಿಕಾರ ವಹಿಸಿಕೊಳ್ಳುವ ಸುಭಾಷ್, ಅದ್ಬುತ ವಾಗ್ಮಿ, ಮಹಾನ್ ದೇಶಪ್ರೇಮಿಯಾಗಿದ್ದ ಚಿತ್ತರಂಜನ್ ದಾಸ್ ರ ಗರಡಿಯಲ್ಲಿ ಬೆಳೆಯಲಾರಂಭಿಸುತ್ತಾರೆ. ಭಾರತದ ದಾಸ್ಯ ನಿರ್ಮೂಲನೆಗೆ ಕ್ರಾಂತಿಯೊಂದೆ ಮಂತ್ರವೆಂದು ನಂಬಿದ್ದ ದಾಸ್, ಸುಭಾಷ್ ರನ್ನು ಒಬ್ಬ ಪ್ರಗತಿಪರ ಕ್ರಾಂತಿಕಾರಿಯನ್ನಾಗಿ ರೂಪಿಸುತ್ತಾರೆ. ಅಲ್ಲಿಂದ ಸುಭಾಷ್ ತಮ್ಮ ಕ್ರಾಂತಿಕಾರಿ ವಿಚಾರಧಾರೆಗಳಿಂದ್ದ ಭಾರತೀಯ ಸ್ವಾತಂತ್ರ್ಯ ಸಂಗ್ರಾಮದ ದಿಕ್ಕನ್ನೆ ಬದಲಾಯಿಸುತ್ತಾರೆ. ಕ್ರಾಂತಿಕಾರಿಗಳೆಂದರೆ ಉಗ್ರಗಾಮಿಗಳೆಂದ್ದು ನಂಬಿದ್ದ ಅದೆಷ್ಟೋ ಸ್ವಾತಂತ್ರ್ಯ ಹೋರಾಟಗಾರರಿಗೆ, ದೇಶಕ್ಕಾಗಿ ಕ್ರಾಂತಿಕಾರಿಗಳ ತ್ಯಾಗ ಬಲಿದಾನಗಳನ್ನು ತಿಳಿಸಿಕೊಟ್ಟಿದ್ದೆ ಸುಭಾಷ್ ಚಂದ್ರ ಭೋಸ್. ಅಲ್ಲಿಂದ ನಿಧಾನವಾಗಿ ಕ್ರಾಂತಿಕಾರಿಗಳ ಸಂಖ್ಯೆ ಹೆಚ್ಚುತ್ತಾ ಹೋಗಿ, ಸ್ವತಂತ್ರ ಸಂಗ್ರಾಮಕ್ಕೆ ಆನೆ ಬಲ ಬರುವುದರೊಂದಿಗೆ, ಬ್ರಿಟೀಷರ ಎದೆ ನಡುಗಲಾರಂಭಿಸುತ್ತದೆ. ದಿನೇ ದಿನೇ ಸುಭಾಷ್ ರ ವರ್ಚಸ್ಸು ಇಮ್ಮಡಿಸುತ್ತ 1938ರ ವೇಳೆಗೆ ಅವರೊಬ್ಬ ಮಹಾನ್ ನಾಯಕನಾಗಿ ಹೊರಹೊಮ್ಮುತ್ತಾರೆ. ದೇಶವಾಸಿಗಳು ಸೋಗಲಾಡಿ ಹೋರಾಟಗಾರರನೆಲ್ಲಾ ಬಿಟ್ಟು, ಸುಭಾಷ್ ರನ್ನು ತಮ್ಮ ನಾಯಕನೆಂದು ಒಪ್ಪಿಕೊಳ್ಳುತ್ತಾರೆ. ಅಂತೆಯೇ ನೇತಾಜಿ ಎಂಬ ಬಿರುದನ್ನು ನೀಡುತ್ತಾರೆ. ಇದು ಗಾಂಧಿ-ನೆಹರು ಸೇರಿದಂತೆ ಕೆಲವು ಕಾಂಗ್ರೆಸ್ಸ್ ನಾಯಕರ ಹೊಟ್ಟೆ ಉರಿಗೆಕಾರಣವಾಗುತ್ತದೆ.
1927ರಿಂದಲೇ ಶುರುವಾಗುವ ಈ ವೈಮನಸ್ಸು ಜಗತ್ತಿಗೆ ತಿಳಿದದ್ದು ಮಾತ್ರ 1939ರ ಕಾಂಗ್ರೆಸ್ಸ್ ಅಧ್ಯಕ್ಷೀಯ ಚುನಾವಣಾ ಸಮಯದಲ್ಲಿ. 1938ರಲ್ಲಿ ಕಾಂಗ್ರೆಸ್ಸ್ ಅಧ್ಯಕ್ಷರಾಗಿ ಆಯ್ಕೆಯಾಗಿದ್ದ ಸುಭಾಷ್, ಮರು ಆಯ್ಕೆ ಬಯಸಿ 1939ರಲ್ಲಿ ಮತ್ತೆ ಅಧ್ಯಕ್ಷೀಯ ಚುನಾವಣೆಗೆ ಸ್ಪರ್ಧಿಸುತ್ತಾರೆ. ಸುಭಾಷ್ ರ ಜನಪ್ರ್ರಿಯತೆ ಕಂಡು ಅದಾಗಲೇ ಬೆಚ್ಚಿಬಿದ್ದಿದ್ದ ನೆಹರು ಮತ್ತು ಕೆಲ ಕಾಂಗ್ರೆಸ್ಸ್ ನಾಯಕರು, ಸುಭಾಷ್ ಮತ್ತೆ ಅಧ್ಯಕ್ಷರಾದಲ್ಲಿ ತಮಗೆ ಉಳಿಗಾಲವಿಲ್ಲವೆಂದು , ನೀವೇ ಏನಾದರು ಮಾಡಬೇಕೆಂದು ಗಾಂಧೀಜಿಯಲ್ಲಿ ಕೇಳಿಕೊಳ್ಳುತ್ತಾರೆ. ಹಿಂಬಾಲಕರ ಮಾತಿಗೆ ಕಟ್ಟುಬಿದ್ದ ಗಾಂಧೀಜಿ ಕೂಡ ಪಟ್ಟಾಭಿ ಸೀತಾರಾಮ್ ಎಂಬುವವರನ್ನು ಸುಭಾಷ್ ರ ವಿರುದ್ಧ ಸ್ಪರ್ಧಿಸುವಂತೆ ಮಾಡಿ, ಸೀತಾರಾಮ್ ಸೋತಲ್ಲಿ ಅದು ಗಾಂಧೀಜಿ ಸೋತಂತೆ ಎಂಬ ಸಣ್ಣತನದ ಹೇಳಿಕೆಯನ್ನು ನೀಡುತ್ತಾರೆ. ಆದರೆ ಅದಾಗಲೇ ಜನಗಳ ನಿಜವಾದ ನಾಯಕರಾಗಿದ್ದ ಭೋಸ್, ಚುನಾವಣೆಯಲ್ಲಿ ಗೆದ್ದು ಮತ್ತೆ ಕಾಂಗ್ರೆಸ್ಸ್ ಅಧ್ಯಕ್ಷರಾಗುತ್ತಾರೆ. ಆದರೆ ಸೀತಾರಾಮ್ ಸೋಲಿನಿಂದ ಗಾಂಧೀಜಿಯವರಿಗಾದ ಅವಮಾನ ತಪ್ಪಿಸಲು, ಕೆಲವೇ ದಿನಗಳಲ್ಲಿ ಅಧ್ಯಕ್ಷ ಹುದ್ದೆಗೆ ರಾಜೀನಾಮೆ ನೀಡಿ, ಕಾಂಗ್ರೆಸ್ಸ್ ತೊರೆಯುವ ಮೂಲಕ ಸಣ್ಣತನ ತೋರಿದವರ ಮುಂದೆ ಮಹಾತ್ಮರಾಗುತ್ತಾರೆ. ೧೯೩೯ರಲ್ಲಿ ಎರಡನೆ ಜಾಗತಿಕ ಯುದ್ಧ ಪ್ರಾರಂಭವಾದಾಗ, ಬ್ರಿಟೀಷ್ ಸರ್ಕಾರ, ಭಾರತ ಯುದ್ಧದಲ್ಲಿ ಬ್ರಿಟೀಷರನ್ನು ಬೆಂಬಲಿಸುತ್ತದೆ ಎಂಬ ಹೇಳಿಕೆ ನೀಡಿದಾಗ , ಗಾಂಧೀಜಿ ಸಹ ಬ್ರಿಟೀಷ್ ಸರ್ಕಾರದ ಹೇಳಿಕೆಗೆ ಸಹಮತ ವ್ಯಕ್ತಪಡಿಸುತ್ತಾರೆ. ಆದರೆ ಸುಭಾಷ್ ಮಾತ್ರ ಭಾರತವನ್ನು ಹರಿದು ಮುಕ್ಕುತ್ತಿರುವ ಬ್ರಿಟೀಷರಿಗೆ ಸಹಾಯ ಮಾಡಲು ಸಾಧ್ಯವೇ ಇಲ್ಲವೆಂದು ಗುಡುಗುತ್ತಾರೆ. ಗಾಂಧೀಜಿಯೊಂದಿಗಿನ ಈ ಭಿನ್ನಾಭಿಪ್ರಾಯ ಕೂಡ ಸುಭಾಷ್ ಕಾಂಗ್ರೆಸ್ಸ್ ತೊರೆಯಲು ಕಾರಣವಾಗುತ್ತದೆ.
ಕಾಂಗ್ರೆಸ್ಸ್ ತೊರೆದ ನಂತರ, ಭೋಸ್ ಬ್ರಿಟೀಷರ ವಿರುದ್ದ ಹೋರಾಡಲು ಭಾರತೀಯ ಸೈನ್ಯವೊಂದನ್ನು ಕಟ್ಟಲು ನಿರ್ಧರಿಸುತ್ತಾರೆ. ಅದರ ಫಲರೂಪವೇ ೧೯೪೨ರಲ್ಲಿ ಸುಭಾಷ್ ಕಟ್ಟಿದ ಇಂಡಿಯನ್ ನ್ಯಾಷನಲ್ ಆರ್ಮಿ. ಸೈನ್ಯಕಟ್ಟಿದ ನಂತರ ಬ್ರಿಟೀಷರನ್ನು ಎದುರಿಸಲು ಬೇರೆ ದೇಶಗಳ ನೆರವು ಅನಿವಾರ್ಯವೆಂದರಿತ ನೇತಾಜಿ, ರಷ್ಯಾ, ಜರ್ಮನಿ ಮತ್ತು ಜಪಾನ್ ದೇಶಗಳ ಸಖ್ಯ ಬೆಳೆಸುತ್ತಾರೆ. ಆಗಿನ ಕಾಲಕ್ಕೆ ಈ ದೇಶಗಳು ವಿದೇಶಿಗನೊಬ್ಬನನ್ನು ನಾಯಕನೆಂದು ಒಪ್ಪಿಕೊಂಡಿದ್ದರೆ ಅದು ಸುಭಾಷ್ ರನ್ನು ಮಾತ್ರ. ಈ ಮೂರು ದೇಶಗಳು ಬ್ರಿಟೀಷ್ ರ ವಿರುದ್ಧ ಹೋರಾಡಲು ಸಹಾಯಮಾಡಲು ಒಪ್ಪಿಕೊಂಡ ಕೂಡಲೇ ಯುದ್ಧ ತಯಾರಿಯಲ್ಲಿ ತೊಡಗಿಕೊಳ್ಳುತ್ತಾರೆ ಸುಭಾಷ್.
ಆದರೆ 1945 ಆಗಸ್ಟ್ 18ರಂದು ಇಡೀ ದೇಶವೇ ಬೆಚ್ಚಿ ಬೀಳಿಸುವ ಸುದ್ದಿಯೊಂದು ಭಾರತೀಯರ ಕಿವಿಗಪ್ಪಳಿಸುತ್ತದೆ. ಜಪಾನ್ ನ ತೈಹೋಕು (ಇಂದಿನ ತೈಪೈ) ವಿನಿಂದ ಚೀನಾಕ್ಕೆ ತೆರಳುತ್ತಿದ್ದ ವೇಳೆ ವಿಮಾನ ಅಪಘಾತವಾಗಿ ನೇತಾಜಿ ಕಣ್ಮರೆಯಾದರೆಂದ ಸುದ್ಧಿ ಹೊರಬೀಳುತ್ತದೆ. ಇಡೀ ದೇಶ ನೇತಾಜಿಯವರಿಗಾಗಿ ಮಿಡಿಯುತ್ತದೆ. ಆದರೆ ನೇತಾಜಿಯವರ ಸುಳಿವು ಮಾತ್ರ ಪತ್ತೆ ಯಾಗುವುದಿಲ್ಲ. ಈತನ್ಮದ್ಯೇ ಮೊದಲೇ ಉಲ್ಲೇಖಿಸಿದ ಎರಡು ಕಾರಣಗಳಿಂದ 1947 ಆಗಸ್ಟ್ 15ರಂದು ಬ್ರಿಟೀಷರು ಭಾರತ ಬಿಟ್ಟು ರಾತ್ರೋರಾತ್ರಿ ಓಡಿಹೋಗುತ್ತಾರೆ.
ಅಲ್ಲಿಂದ ಶುರುವಾಗುತ್ತದೆ ನೋಡಿ ನೇತಾಜಿಯವರ ಸಾವಿನ ಪ್ರಹಸನ.ಅಷ್ಟರವರೆವಿಗೂ ಕೇವಲ ಕಾಣೆಯಾಗಿದ್ದಾರೆಂದು ಕೊಂಡಿದ್ದ ಭಾರತೀಯರಿಗೆ, ನೆಹರು ಎಂಬ ಸ್ವತಂತ್ರ ಭಾರತದ ಮೊದಲ ಪ್ರಧಾನಿ, 1945ರ ವಿಮಾನ ದುರಂತದಲ್ಲಿ ನೇತಾಜಿ ಸಾವನ್ನಪ್ಪಿದ್ದಾರೆಂದು ಘೋಷಿಸಿಬಿಡುತ್ತಾರೆ. ಆದರೆ ನೇತಾಜಿಯವರ ಬಗ್ಗೆ ನೆಹರುಗಿದ್ದ ಅಸೂಯೆ ತಿಳಿದಿದ್ದ ಭಾರತೀಯರಾರು ನೆಹರು ಮಾತನ್ನು ನಂಬುವುದಿಲ್ಲ. ಎಂದಾದರೊಂದು ದಿನ ನೇತಾಜಿ ಹಿಂತುರುಗಿದರೆ ತಮ್ಮ ಸ್ಥಾನಕ್ಕೆ ಕುತ್ತು ಬರಬಹುದೆಂಬ ಭಯವಿದ್ದ ನೆಹರು 1955ರಲ್ಲಿ ಭಾರತೀಯರನ್ನು ನಂಬಿಸಲೋಸುಗವಾಗಿಯೇ ನೇತಾಜಿಯವರ ಸಾವಿನ ಬಗ್ಗೆ ತನಿಖೆ ನಡೆಸಲು ಷಹನಾಜ್ ಆಯೋಗವನ್ನು ರಚಿಸುತ್ತಾರೆ.ಎಣಿಸಿದ್ದಂತೆಯೇ ಷಹಜಾನ್ ಆಯೋಗ ನೇತಾಜಿ ವಿಮಾನ ದುರಂತದಲ್ಲಿ ಸಾವನಪ್ಪಿದ್ದಾರೆಂಬ ವರದಿಯನ್ನೇ ನೀಡುತ್ತದೆ. ಅಲ್ಲಿಗೆ ಅರ್ಧ ಸತ್ಯ ಸಾಯುತ್ತದೆ. ಆದರೂ ಭಾರತೀಯರ ಎದೆಯಲ್ಲಿ ಮಾತ್ರ ಸಂಶಯದ ಎಳೆಯೊಂದು ಉಳಿದುಹೋಗುತ್ತದೆ.
ನಂತರ 1970ರಲ್ಲಿ ರಚಿತವಾದ ಖೋಸ್ಲಾ ಆಯೋಗ ಕೂಡ ಅಂದಿನ ಕಾಂಗ್ರೆಸ್ಸ್ ಸರ್ಕಾರದ ಕೈ ಗೊಂಬೆಯಾಗಿ ನೆಹರು ಮಾತನ್ನೆ ನಿಜವೆನ್ನುತ್ತದೆ. ಆದರೆ ನಿಜವಾದ ಸತ್ಯ ಹೊರಬಂದಿದ್ದು ಮಾತ್ರ, 1998ರಲ್ಲಿ ನಿವೃತ್ತ ನ್ಯಾ..ಮೂರ್ತಿ ಮನೋಜ್ ಕೆ ಮುಖರ್ಜಿ ನೇತೃತ್ವದ ಆಯೋಗ ತನ್ನ ವರದಿ ಸಲ್ಲಿಸಿದ ನಂತರವಷ್ಟೇ. ತೈವಾನ್ ಸರ್ಕಾರ 1945 ಆಗಸ್ಟ್ 14ರಿಂದ 20ರ ವರೆಗೂ ತೈಪೈ ಬಳಿ ಯಾವುದೇ ವಿಮಾನ ದುರಂತ ಸಂಭವಿಸಿರಲಿಲ್ಲ ಎಂಬ ದಾಖಲೆಯನ್ನು ಆಯೋಗಕ್ಕೆ ನೀಡುವುದರ ಮೂಲಕ 1945ರಲ್ಲಿ ನೇತಾಜಿ ಸಾವನಪ್ಪಲಿಲ್ಲ, ಅದು ನೆಹರು ಅವರು ಹೇಳಿದ ಚೆಂದದ ಸುಳ್ಳು ಎಂದು ಮೊದಲ ಬಾರಿಗೆ ಭಾರತೀಯರಿಗೆ ಮನವರಿಕೆಯಾಗುತ್ತದೆ. ಆದರೆ ಮುಖರ್ಜಿ ಆಯೋಗ ಸಂಪೂರ್ಣ ವರದಿ ಸಲ್ಲಿಸುವ ವೇಳೆಗೆ ೨೦೦೪ರಲ್ಲಿ ಮತ್ತೆ ಅಧಿಕಾರಕ್ಕೆ ಬಂದ ಕಾಂಗ್ರೆಸ್ಸ್ ಸರ್ಕಾರ, ಮುಖರ್ಜಿ ಆಯೋಗದ ವರದಿಯನ್ನು ತಿರಸ್ಕರಿಸುತ್ತದೆ. ಅಲ್ಲಿಗೆ ಸತ್ಯವನ್ನು ಮತ್ತೆ ಗಲ್ಲಿಗೇರಿಸಲಾಗುತ್ತದೆ.
ಆದರೆ ಮೊನ್ನೆ, ಅಂದರೆ ಸೆಪ್ಟೆಂಬರ್ ಹದಿನೆಂಟರಂದು ಪಶ್ಚಿಮ ಬಂಗಾಳ ಸರ್ಕಾರ ಬಹಿರಂಗ ಪಡಿಸಿದ 64ಕಡತಗಳ ದಾಖಲೆಗಳಿಂದಾಗಿ ನೇತಾಜಿ 1945ರಲ್ಲಿ ಸಾವನಪ್ಪಿದರು ಎಂಬ ನೆಹರು ಅವರ ಮಾತು ಸುಳ್ಳೆಂಬುದು ಸಾಕ್ಷಿ ಸಮೇತ ಜಗತ್ ಜಾಹೀರಾಗಿದೆ. ಬರೊಬ್ಬರಿ ಹನ್ನೆರೆಡು ಸಾವಿರದ ಏಳೂನೂರ ನಲವತ್ನಾಲ್ಕು ಪುಟಗಳನ್ನು ಹೊಂದಿರುವ ದಾಖಲೆ ನೇತಾಜಿಯವರು ವಿಮಾನ ದುರಂತದಲ್ಲಿ ಮಡಿಯಲಿಲ್ಲವೆಂಬ ಸತ್ಯದ ಜೊತೆ, ನೆಹರು ಅವರಿಗೆ ಸುಭಾಷ್ ಮೇಲಿದ್ದ ಅಸೂಯೆ ಮತ್ತು ಅವರು ಬದುಕಿ ಬಂದರೆ ಅಧಿಕಾರ ಕೈ ತಪ್ಪಬಹುದೆಂಬ ಭಯದಿಂದ, ನೇತಾಜಿ ಕುಟುಂಬದ ಮೇಲೆ ಬರೋಬ್ಬರಿ 20ವರ್ಷಗಳು ಬೇಹುಗಾರಿಕೆ ನಡೆಸಿದ ಸತ್ಯವನ್ನು ಅನಾವರಣಗೊಳಿಸಿವೆ. ಕಡತಗಳಲ್ಲಿ, 1948ರಲ್ಲಿ ನೆಹರು ಅಂದಿನ ಬ್ರಿಟೀಷ್ ರಾಣಿಗೆ ನೇತಾಜಿಯವರನ್ನು ಸೆರೆಹಿಡಿಯುವಂತೆ ಬರೆದಿದ್ದ ಪತ್ರವು ಸೇರಿದೆ. ಅದರೊಂದಿಗೆ ನೆಹರು ಅವರ ಮುಖವಾಡ ಕಳಚಿ ಬಿದ್ದಿದೆ. ಕಡತಗಳಲ್ಲಿ ನೇತಾಜಿಯವರ ಪ್ರತಿಯೊಬ್ಬ ಕುಟುಂಬಸ್ಥರ ಮೇಲೆ 1948 ರಿಂದ 1968ರ ವರೆಗೂ ಬೇಹುಗಾರಿಕೆ ನೆಡೆಸಿದಕ್ಕೆ ಸಾಕಷ್ಟು ಪುರಾವೆಗಳಿವೆ. 1948ರಲ್ಲಿ ನೇತಾಜಿ ಅವರ ಅಣ್ಣನ ಮಗನಿಗೆ ಬರೆದಿದ್ದರೆನ್ನಲಾದ ಪತ್ರಗಳು ಸಹ ಕಡತದಲ್ಲಿವೆ. ಈ ಎಲ್ಲಾ ಕಡತಗಳಿಂದ ಒಂದಂತ್ತು ಸ್ಪಷ್ಟವಾಗಿದೆ ನೆಹರು ಹೇಳಿದಂತೆ ನೇತಾಜಿ 1945ರಲ್ಲಿ ಮರಣವನಪ್ಪಿಲ್ಲ, ಆನಂತರವೂ ಬದುಕಿದ್ದರೆಂಬುದು. ಆದರೆ 1945 ರಲ್ಲಿ ಯಾಕೆ ಕಾಣೆಯಾದರು, ನಂತರ ಎಷ್ಟು ವರ್ಷ ಬದುಕ್ಕಿದ್ದರು, ಇದ್ದರೂ ಎಲ್ಲಿದ್ದರು, ಬದುಕಿದ್ದವರು ಜನಮಾನಸಕ್ಕೇಕೆ ಹಿಂದುರುಗಲಿಲ್ಲ ವೆಂಬ ಪ್ರಶ್ನೆಗಳಿಗೆ ಉತ್ತರವಿನ್ನೂ ನಿಗೂಢವಾಗಿಯೇ ಉಳಿದಿದೆ. ಇವೆಲ್ಲಾ ಪ್ರಶ್ನೆಗಳಿಗೆ ಉತ್ತರ ಸಿಗಬೇಕೆಂದರೆ ಕೇಂದ್ರ ಸರ್ಕಾರದ ವಶದಲ್ಲಿರುವ 135 ರಹಸ್ಯ ಕಡತಗಳು ಬಹಿರಂಗವಾಗಬೇಕಿದೆ.135 ಕಡತಗಳಲ್ಲಿ, 22ಕಡತಗಳು ಕೇವಲ ನೇತಾಜಿಯವರ 1945ರ ನಂತರದ ಜೀವನದ ರಹಸ್ಯಗಳನ್ನು ಹೊಂದಿವೆ ಎನ್ನಲಾಗುತ್ತಿದೆ. ಆ ಕಡತಗಳೂ ಅತೀ ಶೀಘ್ರದಲ್ಲಿ ಬಹಿರಂಗಗೊಳ್ಳುವ ಎಲ್ಲಾ ಸಾಧ್ಯತೆಗಳಿವೆ. ಅಧಿಕಾರಕ್ಕೆ ಬಂದ ಕೂಡಲೆ ಮೋದಿಯವರು ನೇತಾಜಿ ಕುಟುಂಬವನ್ನು ಭೇಟಿಯಾಗಿದ್ದು ಈ ವಾದಕ್ಕೆ ಪುಷ್ಠಿ ನೀಡುತ್ತದೆ.
ಅದೇನೆ ಇರಲಿ ನೇತಾಜಿಯವರ ಜನ್ಮದಿನವಾದು ಇಂದು ಆ ದೇವನಲ್ಲಿ ಬೇಡುವುದೊಂದೆ, ನೇತಾಜಿಯವರ ಕಾಣೆಯ ಹಿಂದಿರುವ ಎಲ್ಲಾ ರಹಸ್ಯಗಳು ಬಹಿರಂಗವಾಗಲಿ. ನೇತಾಜಿಯವರ ಜೀವನ, ಇತಿಹಾಸದಲ್ಲಿ ತೆರೆದ ಪುಸ್ತಕವಾಗಲಿ. ನಿಜವಾದ ಮಹಾತ್ಮರಾದ ನೇತಾಜಿಯವರಿಗೆ ಭಾರತೀಯ ಇತಿಹಾಸದಲ್ಲಿ ಅವರ ತ್ಯಾಗ-ಬಲಿದಾನಗಳಿಗೆ ಸರಿಯಾದ ಗೌರವ, ಮನ್ನಣೆ ಸಿಗಲಿ. ನೇತಾಜಿಯವರ ಬಗೆಗಿನ ಎಲ್ಲಾ ಸತ್ಯಗಳು ಬಹುಬೇಗ ಹೊರಬರಲಿ ಎಂದು ಆಶಿಸೋಣ. ಅಷ್ಟಕ್ಕೂ, ಗಾಂಧೀಜೀ ಅವರ ಆತ್ಮಕಥೆಯಲ್ಲಿ ಹೇಳಿರುವಂತೆ "Three things cannot be long hidden: the sun, the moon, and the truth." (ಜಗತ್ತಿನಲ್ಲಿ ಸೂರ್ಯ, ಚಂದ್ರ ಮತ್ತು ಸತ್ಯವನ್ನು ತುಂಬಾ ದಿನ ಬಚ್ಚಿಡುವುದು ಅಸಾಧ್ಯ, ). ಸತ್ಯ ಮೇವ ಜಯತೆ!
ಜೈ ನೇತಾಜಿ, ಜೈ ಹಿಂದ್
ಮೇರಾ ಭಾರತ್ ಮಹಾನ್.


ಇಷ್ಟ ಆದ್ರೆ Like ಮಾಡಿ ನಮ್ಮನ್ನು ಪ್ರೋತ್ಸಾಹಿಸಿ...