ಹುಡುಕಾಟ

Posted by ಮಧುಚೇತನ್ ರಾವ್ ಕಾಸರವಳ್ಳಿ on 11-Feb-2017
ಬಾನಿನಂಚಿನಲ್ಲಿ ಬೆಳಕೊಂದಿದೆ
ಅಕ್ಷಿಗೆ ತೋರಲು ಮುಸುಕು ಮಂಜಿದೆ ;
ಬಾಳಿನ ಪುಟವು ಕಳೆಗುಂದಿದೆ
ಎತ್ತರಕ್ಕೇರುವ ಛಲವೊಂದಿದೆ ; ಗುರಿಯಿಲ್ಲದೆ !

ಬದುಕಲಿ ವಿಫಲತೆ ಮೈಗೂಡಿದೆ ;
ಚಿನ್ಮಯ ಚಿಂತನ ಚಿತೆಸೇರಿದೆ
ಸಫಲತೆ ಕಾಣುವ ಸೈರಣೆಯೊಂದೇ ಮನಸ್ಸಲ್ಲಿದೆ ;
ವಿಘ್ನವಿರದ ಸೂತ್ರವು ಒಂದು ಬೇಕಾಗಿದೆ
ಹುಡುಕುವ ಭರದಲ್ಲಿ ಪ್ರಶ್ನೆಗಳುಳಿದಿವೆ ಉತ್ತರವಿಲ್ಲದೆ ;

ಮಂಜು ಕರಗಿದೆ, ಬೆಳಕು ಕಂಡಿದೆ
ಗುರಿಸೇರಿಸುವ ಗುರುವಿರುವತನಕ, ಬಾಳಿನ ಆಸೆಗೆ ಹಣತೆಯಿದೆ ;
ದೃಢಸಂಕಲ್ಪದ ಫಲದಲಿ ಇಂದು , ಪುನರುತ್ಥಾನದ ಚಿಹ್ನೆಯಿದೆ ;
ಪ್ರಶ್ನೆಯ ಬೆನ್ನತ್ತ ಹಾದಿಯಲ್ಲಿ ಉತ್ತರವೊಂದು ಕಂಡಿದೆ


ಇಷ್ಟ ಆದ್ರೆ Like ಮಾಡಿ ನಮ್ಮನ್ನು ಪ್ರೋತ್ಸಾಹಿಸಿ...