ಇಂತದ್ದೊಂದು ಪಯಣ...!

Posted by ಸೌಮ್ಯ ನಟರಾಜ್ on 13-Feb-2017
ಹೆಗಲೇರಿ ಮಲಗಿರೋ ಹುಡುಗನ ನೋಡುತ್ತಾ
ಬೇಕಂತಲೆ ಚೂರು ಹತ್ತಿರ ಜರುಗಿದೆ...
ಕೆಂಪಾಗಿರೋ ನನ್ನಯ ಚಹರೆಯು ಗೊತ್ತಿಲ್ಲದೆ
ಈತನ ತಲೆಗೂದಲ ತಾಕುವ ಹಠ ಮಾಡಿದೆ...
ಬೇರಾರು ತಿಳಿಯರು ಇಲ್ಲಿ ನಡೆದಿರೋ
ಸವಿ ಘಳಿಗೆಯ ಸಿಹಿ ಅನುಭವ...
ನನಗೇತಕೊ ನನ್ನೊಳಗೆಯೇ ಒಂಥರಾ ಸಡಗರ....

ಸುತ್ತಲೆಲ್ಲ ಕತ್ತಲಾಗಿ ಇರುಳು
ಒಂಟಿಯಾಗಿ ಇವನ ನಾ ಕಾದಿರಲು
ಕಣ್ಣೆದುರೇ ಕಣ್ಣ್ಮುಚ್ಚಿ , ಮೈಮರೆತನೊ ಮನಬಿಚ್ಚಿ
ಏನೋ ನೆನೆದು ನಗಲು ಇವನು
ಬೇರೆಯೇನು ಕಾಣೆ ನಾನು...
ಆಗಾಗ ಕಣ್ಬಿಟ್ಟು , ಹೊಸದಾದ ಉಸಿರಿಟ್ಟು
ನನ್ನ ಕಡೆಯೇ ತಿರುಗಿ ಒರಗಿ ಇರುವ ಮುಖವ
ನೋಡಿ ನಾ ಸಹಿಸದಾದೆ ಸ್ಪರ್ಶ ಸುಖವ...

ಹೆಗಲೇರಿ ಮಲಗಿರೋ ಹುಡುಗಿಯ ನೋಡುತ್ತಾ
ಬೇಕಂತಲೆ ಚೂರು ಹತ್ತಿರ ಜರುಗಿದೆ...
ಹೆದರಿರೋ ನನ್ನಯ ಬೆರಳುಗಳು ಗೊತ್ತಿಲ್ಲದೆ
ಈಕೆಯ ಮುಂಗುರುಳನು ತಾಕುವ ಹಠ ಮಾಡಿದೆ...


ಬಾನಲ್ಲಿ ಹರಡಿರಲು ಮುಂಜಾನೆ
ಆಳ ನಿದ್ರೆಯಲ್ಲಿ ನನ್ನ ಜಾಣೆ
ಕನಸ್ಸಲೇ ಕಳೆದೋಗಿ , ಮಾತಿಲ್ಲದೆ ಮಂಕಾಗಿ
ಏನೋ ಕಂಡು ಹೆದರಿ ಇವಳು
ಭಯದಿ ಕೈ ಹಿಡಿದಿಹಳು...
ಮುದ್ದಾದ ಮನಸಿಲ್ಲಿ , ಅಲ್ಲಲ್ಲೇ ಅಲುಗಾಡಿ
ನನ್ನ ಎದುರೇ ಮೋಡಿ ಮಾಡೋ ಇವಳ ಚೆಲುವ
ನೋಡಿ ನಾ ತಾಳದಾದೆ ತುಸು ತಲ್ಲಣವ...


ಇಷ್ಟ ಆದ್ರೆ Like ಮಾಡಿ ನಮ್ಮನ್ನು ಪ್ರೋತ್ಸಾಹಿಸಿ...