...ನಿನ್ನ ಬಿಂಬ ಪ್ರೇಮದ ಮೂರ್ತಿಯಂತೆ

Posted by ಧೃತಿ on 19-Feb-2017
ಮನದ ಮರುಭೂಮಿಯಲಿ ನೀರಿನಂತೆ
ಕಾರಿರುಳ ಸೀಳಿ ಹೊಳೆವ ಮಿಂಚಿನಂತೆ
ಬರಿದಾದ ಭುವಿಯ ತಣಿಸುವ ಮಳೆಯಂತೆ
ಪಥ ಪ್ರದರ್ಶಿಸಿದೆ ಧ್ರುವ ನಕ್ಷತ್ರದಂತೆ
ಎಲ್ಲೆಲ್ಲೂ ಜೀವಕಳೆ ತುಂಬುವ ರವಿಯಂತೆ
ಈ ಚೈತನ್ಯಕೆ ಹೆಸರು 'ತಾಯಿ' ಅಂತೆ

ನಾದ ಸುಧೆಯ ಹರಿಸುವ ವೀಣೆಯಂತೆ
ಮನದ ಮುಂಗುರುಳ ತೀಡುವ ಮಂದ ಮಾರುತದಂತೆ
ಸದಾ ನನ್ನೊಡನೆ ನೀನಿಂತೆ ಭರವಸೆಯ ಗೆಳತಿಯಂತೆ
ನೀ ಎಂದೂ ಬತ್ತದ ಸ್ಪೂರ್ಥಿಯ ಚಿಲುಮೆಯಂತೆ
ಅಮ್ಮ! ನೀ ನನ್ನ ಬಾಳ ಜ್ಯೋತಿಯಂತೆ
ಕಂಗಳಲ್ಲಿ ತುಂಬಿದೆ ನಿನ್ನ ಬಿಂಬ ಪ್ರೇಮದ ಮೂರ್ತಿಯಂತೆ


ಇಷ್ಟ ಆದ್ರೆ Like ಮಾಡಿ ನಮ್ಮನ್ನು ಪ್ರೋತ್ಸಾಹಿಸಿ...