ಹೇ ಪ್ರಭು!

Posted by ಭಾವನ ಭಟ್ on 19-Feb-2017
ಹೇ ಪ್ರಭು! ನೀನೀ ಜಡಜೀವಿಗೆ,
ಕೊಂಚ ಚೈತನ್ಯ ತುಂಬಲಾರೆಯಾ!
ನಿನ್ನ ಪಾದಧೂಳಿಗೂ ಸಮವಾಗದ
ಕ್ಷುದ್ರ ಜೀವಿಯ ಮೇಲೆ ಒಂದಿಷ್ಟು
ಕರುಣೆ ತೋರಲಾರೆಯಾ!

ನೀನೊಂದು ಸಾಗರವಾದರೆ,
ನಾನೊಂದು ನೀರಿನ ಹನಿ.
ನೀನೀ ಭೂಮಿಯಾದರೆ,
ನಾನೊಂದು ಮಣ್ಣಿನ ಕಣ.
ನೀನು ಪ್ರಭುವಾದರೆ,
ನಾನು ನಿನ್ನ ಸೇವಕ.
ನೀನು ಕರುಣಾಮೂರ್ತಿಯಾದ ತಾಯಿಯಾದರೆ,
ನಾನು ಏನೊಂದೂ ತಿಳಿಯದ ಮಗು.

ಸಾಗರದಲ್ಲಿ ಒಂದು ಹನಿ ನೀರಿಗೆ
ಜಾಗವಿಲ್ಲವೇ?
ಇಡೀ ಭೂಮಿಯಲ್ಲಿ ಒಂದು ಮಣ್ಣಿನ ಕಣಕ್ಕೆ
ಸ್ಥಾನ ವಿಲ್ಲವೇ?
ದಯಾಭರಿತನೂ,ಜ್ಞಾನಿಯೂ,ವಿವೇಕಿಯೂ,ಸಮೃದ್ಧ ನೂ
ಆದ ಪ್ರಭುವಿಗೆ ಒಬ್ಬ ಸೇವಕನು ಭಾರನಾದನೆ?
ಮಮತಾಮಯಿಯಾದ ಮಾತೆಯ ಮನದಮಡಿಲಲ್ಲಿ
ಬಡಪಾಯಿ ಮಗುವಿಗೆ ಸ್ಥಳವಿಲ್ಲವೇ?


ಇಷ್ಟ ಆದ್ರೆ Like ಮಾಡಿ ನಮ್ಮನ್ನು ಪ್ರೋತ್ಸಾಹಿಸಿ...