ಪ್ರಕೃತಿಯಲ್ಲಿ ಸಿಕ್ಕೀತೆ ಉತ್ತರ...?!

Posted by ಮೇದಿನಿ ರಾವ್ on 26-Feb-2017
ಬೆಟ್ಟದ ತುದಿಯಲ್ಲಿ ಏಕಾಂಗಿಯಾಗಿ ಕುಳಿತಿಹೆ ನಾ

ಸುಂಯ್ ಎನ್ನುವ ತಂಪಾದ ಗಾಳಿಯ ರಭಸ

ನಯನಗಳ ತುಂಬಾ ಗಿಡಮರ ಬಳ್ಳಿಗಳ ತೂಗುಯ್ಯಾಲೆ

ಚಿಲಿಪಿಲಿಗುಡುವ ಹಕ್ಕಿಗಳ ಕಲರವ

ಹತ್ತಿಹರಡಿದಂತಿರುವ ಮೋಡಗಳು


ನಿಸರ್ಗದ ಅದ್ವಿತೀಯ ಸೊಬಗ ಸವಿದು, ಹಗುರಾಯಿತು ಮನ

ರೆಪ್ಪೆ ಮಿಟುಕಿಸದಂತೆ ಕಣ್ ತುಂಬಿಕೊಂಡು, ಉಲ್ಲಾಸವಾಗಿದೆ ಮನ


ತೇಲುತಿದೆ ಮನ, ಆಲೋಚನೆಯೆಂಬ ಸಾಗರದಿ

ಹಂಬಲಿಸಿದೆ ಮನ, ತನ್ನೊಳಗಿನ ತಲ್ಲಣವನ್ನು ಕೇಳುವ ಜೀವಕ್ಕಾಗಿ

ತುಡಿಯುತಿದೆ ಮನ, ಆ ಸುಂದರ ಸೌಂದರ್ಯವ ಅನುಭವಿಸಿ, ಅನುಭವವ ಹಂಚಿಕೊಳ್ಳಲು...


ಒಮ್ಮೆಲೆ, ನೂರಾರು ಯೋಚನೆಯಲಿ ಸಿಲುಕಿತು ಮನ

ಮನದಿ ಆವರಿಸಿತು, ತನ್ನವರಾರಿಲ್ಲ ಅನ್ನುವ ಭಾವ

ಸಕಲವಿದ್ದರೂ, ಸಾಲದಂತ ಅಭಾವದ ಭಾವ

ಅಂತರಂಗದಿ ಕಾಡಿತು ಏಕಾಂತತೆಯ ಮೌನದ ಮಾತು

ಒಂಟಿ ಭಾವದ ಆತ್ಮದ ಕೂಗಿಗೆ ಪ್ರತಿಧ್ವನಿಯೇ ಇಲ್ಲ


ಇಷ್ಟ ಆದ್ರೆ Like ಮಾಡಿ ನಮ್ಮನ್ನು ಪ್ರೋತ್ಸಾಹಿಸಿ...