ಹಲವರು ಹೋಲಿಸಿದರವಳ ನಿಗೂಢತೆಗೆ...!

Posted by ಧೃತಿ on 08-Mar-2017
ಹಲವರು ಹೋಲಿಸಿದರವಳ ನಿಗೂಢತೆಗೆ
ಅರಿಯದಾದರು ಅವಳ ಮನದ ಮಾತುಗಳ
ಹೋಲಿಸಿದರವಳ ಮಾಯೆಯ ಛಾಯೆಗೆ

ಯಾರೂ ಅರಿಯದಾದರು ಅವಳ ಅಂತರಂಗವ
ಅವಳೆದೆ ವೀಣೆಯ ಮಮತೆಯ ಶ್ರುತಿಯ ಭಾವತರಂಗವ

ಒಮ್ಮೆ ಹೊಕ್ಕು ನೋಡಿ ಆವಳ ಮನವ
ಕಾಣುವಿರಲ್ಲಿ ಗಗನಕೂ ಮೀರಿದ ಒಲವ
ಆಲಿಸಿ ಅವಳ ಜಗದ ಕಥನವ

ಅನುಭವಿಸಿ ಒಮ್ಮೆ ಅಲ್ಲಿನ ಬಿಗಿ ಮೌನವ
ಅರಿಯುವಿರಿ ಅವಳ ಕ್ಷಮಾಗುಣವ
ಆಗ ಕಾಣುವಿರಿ ಅವಳ ಪ್ರೇಮದ ಪ್ರಕಾಶವ

ಪ್ರೀತಿ ಗೌರವಕೆ ಪಾತ್ರಳಿವಳು
ಶಕ್ತಿಯ ಸ್ವರೂಪಳಾದವಳು
ಸ್ರುಷ್ಟಿಯ ಸಾರ್ಥಕತೆಯೇ ಇವಳು!

ಅರ್ಪಣೆ: ಜಗದ ಎಲ್ಲಾ ಸ್ತ್ರೀಯರಿಗೆ
ಆಂತರಾಷ್ಟ್ರೀಯ ಮಹಿಳಾ ದಿನದ ಶುಭಾಶಯಗಳು


ಇಷ್ಟ ಆದ್ರೆ Like ಮಾಡಿ ನಮ್ಮನ್ನು ಪ್ರೋತ್ಸಾಹಿಸಿ...