ನೆನಪುಗಳಿರಬೇಕು ..!

Posted by ವಿನಯ್ on 10-Mar-2017


ಈ ಬದುಕ ದಾರಿಯಲಿ ಬಂದಿರುವೆ ತುಸು ದೂರ
ಸದಾ ತುಡಿಯುವ ಜೀವಕ್ಕಿಲ್ಲಿ ನಿಲ್ಲಲಾಗದ ಆತುರ

ಜಂಜಾಟಕ್ಕೆ ಸಿಲುಕಿಸಿದ್ದ ಕಲ್ಲು-ಮುಳ್ಳುಗಳು ಅನೇಕ
ಆದರೆ ರಂಗವಲ್ಲಿ ಬರೆದು ಹೂವ ಹಾಸಿದವು ಬಹುತೇಕ

ಕಷ್ಟದ ದಾರಿಗಳು ಕಲಿಸಿದ ಪಾಠಗಳು ಹಲವಾರು
ಸೂಕ್ಷ್ಮ ತಿರುವುಗಲ್ಲಿ ಹೃದಯವಾಯಿತು ನುಚ್ಚು ನೂರು

ಹಿಂತಿರುಗಿ ನೋಡಲು ಬಯಸುತ್ತಿರಲು ನಾ
ಹಿಂದೇಟು ಹಾಕುತ್ತಾ ಬೆಚ್ಚಿಬಿದ್ದಿದೆ ಈ ಮನಾ

ಗಾಯದ ನೋವಿನಲಿ ನರಳುತ್ತಿದ್ದಾಗ ನನ್ನೊಳಗೆ
ಸ್ನೇಹವೆಂಬ ಸಿಹಿ ಗಾಳಿ ಸಿಂಪಡಿಸಿತು ಮುಗುಳ್ನಗೆ

ಮುಂದಿರುವ ಸವಾಲುಗಳೆಷ್ಟೋ ನಾನರಿಯೇ
ಬಾಳಿನ ಮಜಲುಗಳಲ್ಲಿ ಮಜವಿರುವುದಂತು ಸರಿಯೇ

ಕತ್ತಲೆಯೆಂದು ತಿಳಿಯಲು ಬೆಳಕಾಗಬೇಕು
ಬೆಳಕ ಶಕ್ತಿ ತಿಳಿಯಲು ಕತ್ತಲೂ ಬರಬೇಕು

ನಾಲ್ಕು ದಿನದ ಬದುಕಿನಲಿ ನೋವು-ನಲಿವುಗಳೆರಡೂ ಬೇಕು
ಎಲ್ಲಕಿಂತ ಮಿಗಿಲಾಗಿ ಮತ್ತೆ ಬದುಕಬೇಕೆನ್ನಿಸುವ ನೆನಪುಗಳಿರಬೇಕು ನೆನಪುಗಳಿರಬೇಕು..!


ಇಷ್ಟ ಆದ್ರೆ Like ಮಾಡಿ ನಮ್ಮನ್ನು ಪ್ರೋತ್ಸಾಹಿಸಿ...