ಸೂರ್ಯೋದಯದ ಸೊಬಗು

Posted by ಧೃತಿ on 09-Jun-2017
ಮೂಡಣದ ಬಾನು ಕೆಂಪೇರಿತು
ನವ ಚೇತನದ ಕಿರಣ ಬೀರಿತು

ನೇಸರನ ಕಾಂತಿಗೆ ಬೆಳಕಾಯಿತು
ಇಬ್ಬನಿ ಕರಗಿ ನೀರಾಯಿತು
ಜಗವೆಂಬ ಶಿಶು ಕಣ್ತೆರೆಯಿತು
ನಿಶೆ ಕಳೆದು ನವೋದಯವಾಯಿತು

ಆಗಸದಿ ಹೊಂಗಿರಣದ ಹಂದರ
ಹಕ್ಕಿ ಚಿಲಿಪಿಲಿಯ ಇಂಚರ
ಉದಯರಾಗದ ಸ್ವರ ಸಂಚಾರ
ಹಸಿರಿಗೆ ಹೂಗಳ ಸಿಂಗಾರ

ಬೆಚ್ಚನಯ ಹಿತಗಾಳಿ ಬೀಸಲು
ನಿದ್ರಿಸುತಿದ್ದ ಲೋಕವೇಳುತಿರಲು
ಹಸಿರು ಹೊಸರಾಗಕೆ ಕುಣಿಯುತಿರಲು
ಚಿಮ್ಮುತಿಹುದು ವಿಶ್ವಾಸದ ಹೊನಲು


ಇಷ್ಟ ಆದ್ರೆ Like ಮಾಡಿ ನಮ್ಮನ್ನು ಪ್ರೋತ್ಸಾಹಿಸಿ...