ಪಿಸುಮಾತು ಕೇಳದೆ ಮನ ನೊಂದು ಕೂತಿದೆ

Posted by ಸಹನಾ ಕಾರಂತ್ on 12-Dec-2017
ತಂಗಾಳಿ ಬೀಸದ ಹುಣ್ಣಿಮೆ ರಾತ್ರಿಯಲಿ,
ಪಿಸುಮಾತು ಕೇಳದೆ ಮನ ನೊಂದು ಕೂತಿದೆ
ಬಿಡುವಿಲ್ಲದೆ ಬಳಿಬರುವ ಪ್ರತಿಯೊಂದು ಅಲೆಯಲೂ,
ಸಿಗದ ಮುತ್ತಿಗೆ ತಡಕಾಡಿ ಹುಡುಕಿದೆ

ದೂರದಲ್ಲೆಲ್ಲೋ ಕಾಣುವ ಬೆಳಕಲಿ,
ಕಳೆದೋದ ಮನದ ಅನ್ವೇಷಣೆ ನಡೆದಿದೆ
ನೋವಿನ ಗಾಯಕೆ ಸೆರೆಯಾದ ಮೌನದಲಿ,
ನಿಟ್ಟುಸಿರ ಸದ್ದೇ ಅತಿಯಾಗಿ ಕೇಳಿದೆ

ನಕ್ಷತ್ರವೇ ಕಾಣದ ಮೋಡಗಳ ಮರೆಯಲಿ,
ಚಂದಿರನ ನೋಡುವ ಬಯಕೆಯೊಂದು ಮೂಡಿದೆ
ಸುಂದರ ಬೆಳಕು ಮೂಡುವ ಹೊತ್ತಲ್ಲಿ,
ಮುಗಿಯುವ ರಾತ್ರಿಗೆ ಮನವೀಗ ಮರುಗಿದೆಇಷ್ಟ ಆದ್ರೆ Like ಮಾಡಿ ನಮ್ಮನ್ನು ಪ್ರೋತ್ಸಾಹಿಸಿ...