ಕೇಳದೇ ನೀ ನನ್ನವನಾಗು

Posted by ಮಂದಾರ ಕೆ.ಆರ್ on 19-Nov-2016
ಆ ದಿನದ ನೆನಪನ್ನ ಬಚ್ಚಿಟ್ಟಿದ್ದೆ
ನೀ ನನ್ನ ದಿಟ್ಟಿಸಿ ನೋಡಿದ ಪರಿ
ನನ್ನೊಳಗೆ ನೀ ಇಳಿದೇ ಬಿಟ್ಟಿದ್ದೆ
ಹೇಳದಂತೆಯೇ ಏನನ್ನೂ ಸರಿ..

ನಿನ್ನ ರೆಪ್ಪೆಯ ಜೊತೆ ಸೇರಿ
ನನ್ನ ರೆಪ್ಪೆಯೂ ಮಿಟುಕುತ್ತಿರಲಿಲ್ಲ..
ಕಂಗಳಲಿ ನಿನ್ನ ಬಿಂಬವಲ್ಲದೇ
ಬೇರೇನೂ ಕಾಣುತ್ತಿರಲಿಲ್ಲ..

ಪದೇ ಪದೇ ಕಾಡುತಿದೆ
ನಿನ್ನದೇ ಸ್ವರೂಪ
ಮನಸ ಮಾಡಲೇ
ಕನ್ನಡಿ ಹಿಡಿದ ನಿನ್ನ ಪ್ರತಿರೂಪ

ಜಗದಿ ಇರುವ ಸುಖವನೆಲ್ಲ
ನಿನ್ನಲೇ ಕಾಣುವೆ ನಲ್ಲ
ಮೂರ್ಖ ಮನಸು ಕುಣಿಯುತಿಲ್ಲ
ತಿಳಿದು ನೀನು ನನ್ನಲಿಲ್ಲ..

ಬಚ್ಚಿಟ್ಟ ನೆನಪಿಗೇನು ಗೊತ್ತು
ಎದ್ದು ಕಾಡಬಾರದೆಂದು..
ಮುಚ್ಚಿಟ್ಟ ಪ್ರೀತಿಗೆ ಗೊತ್ತು
ಕಣ್ಣೊಳಗಿಂದಲೇ ನಿನ್ನ ಸೇರಬಹುದೆಂದು..

ನೆನಪ ಮರೆಸೊ ಔಷಧ ನೀಡು
ಕನಸ ಕಳಚಿ ನೀ ನಿಜವಾಗು
ಒಲವ ಬಯಕೆ ಮೂಡುತಲಿರಲು
ಕೇಳದೇ ನೀ ನನ್ನವನಾಗು.


ಇಷ್ಟ ಆದ್ರೆ Like ಮಾಡಿ ನಮ್ಮನ್ನು ಪ್ರೋತ್ಸಾಹಿಸಿ...