ಸರಿಯಾಗಿ ತಿಳಿದಿ(ನೆನಪಿ)ದೆ ನನಗೆ...!

Posted by ಕಿರಣ್ ಎನ್. ಜಿ on 28-Nov-2016
ಸರಿಯಾಗಿ ತಿಳಿದಿದೆ ನಮಗೆ ,
ಇದಕೆಲ್ಲ ಕಾರಣ ಮೋದಿ ನಡೆಯೇ,
ದೇಶದ ಪ್ರತಿ ಗಲ್ಲಿಯೊಳಗೂ
ಮೋದಿಯಾ ಮೆರವಣಿಗೆ..
ಕನಸಿನ ಕುಲುಮೆಗೆ,
ಉಸಿರನು ಊದುತ,
ಕಿಡಿ ಹಾರುವುದೂ ಇನ್ನೂ ಖಚಿತ..

ಮಾತಲ್ಲೇ ಇದೇ ಚಾಟಿ ಉತ್ತರ,
ಹಾದಿ ಹಾದಿಗೂ ಪ್ರಶ್ನೆ ಏತಕೆ?
ಏನೇ ಕಂಡರೂ ನೀವೆ ಜ್ಞಾಪಕ
ನೀವೆ ಔಷಧಿ ಕಪ್ಪು ಕಿಚ್ಚಿಗೆ..
ತೆರೆದೊಂದು ನೀವು ಹೊಸ ಅಧ್ಯಾಯ,
ಸಿಗದಿದ್ದಾಗ ಆಕ್ರೋಶ,ಅನ್ಯಾಯ..
ನಿಮ್ಮಯ ನಡೆ ನುಡಿ,
ಜನತೆಯೇ ಅಭಿಮತ,
ಬದಲಾವಣೆಯೂ ಇನ್ನೂ ಖಚಿತ..

ಸರಿಯಾಗಿ ತಿಳಿದಿದೆ ನಮಗೆ ,
ಇದಕೆಲ್ಲ ಕಾರಣ ಮೋದಿ ನಡೆಯೇ,


ನಿಮ್ಮ ಮಾತಿಗೆ ಸಿದ್ಧವಾಗಿದೆ,
ಭ್ರಮಾಲೋಕದ ಸುಳ್ಳು ರಂಗಸಜ್ಜಿಕೆ
ಕಪ್ಪು ಬಿಳುಪಿನ ತಪ್ಪು ಜೀವನ,
ಖಾಲಿ ಮಾಡುವ ಬುದ್ಧಿವಂತಿಕೆ..
ಸೆರೆಸಿಕ್ಕಾಗ ಬೇಕೀಗ ಜಾಮೀನು
ಕುಹಕಕ್ಕೀಗ ಬೇಕುಂಟು ಜಾಮೂನು
ಕೊರೆಯುವ ಹಣದಲಿ,
ಇರುಳನೂ ಬೈಯುತ,
ದಿನ ತಳ್ಳುವುದೂ ಇನ್ನೂ ಖಚಿತ..

ಸರಿಯಾಗಿ ತಿಳಿದಿದೆ ನಮಗೆ ,
ಇದಕೆಲ್ಲ ಕಾರಣ ಮೋದಿ ನಡೆಯೇ,
ದೇಶದ ಪ್ರತಿ ಗಲ್ಲಿಯೊಳಗೂ
ಮೋದಿಯಾ ಮೆರವಣಿಗೆ..
ಕನಸಿನ ಕುಲುಮೆಗೆ,
ಉಸಿರನು ಊದುತ,
ಕಿಡಿ ಹಾರುವುದೂ ಇನ್ನೂ ಖಚಿತ..


ಇಷ್ಟ ಆದ್ರೆ Like ಮಾಡಿ ನಮ್ಮನ್ನು ಪ್ರೋತ್ಸಾಹಿಸಿ...