ದ್ವಂದ್ವಾಶಯ...!

Posted by ಸಹನಾ ಕಾರಂತ್ on 06-Dec-2016
ಓಡುವ ಕಾಲವ ಸ್ವಲ್ಪ ಹಿಡಿದಿಟ್ಟು,

ವಿಮೋಚನೆ ನೀಡಲೇ, ಅತಿಯಾಗಿ ಬರೆದ ಕೈಗಳಿಗೆ?

ಅರ್ಥಗರ್ಭಿತ ಸಾಲುಗಳು ಅರ್ಥವೇ ಆಗದಿದ್ದಾಗ,

ವ್ಯರ್ಥ ಹುಡುಕಾಟವೇಕಿನ್ನು ಅವಿತಿರುವ ಪದಗಳಿಗೆ!


ಸಮಯವು ಸಹಕರಿಸಿದೆ ಕಲ್ಪನೆಯ ತಡೆಯಲು

ನಿಷೇದನೆ ಹಾಕಲೇ, ದೈನಂದಿನದ ಸ್ವಪ್ನಗಳಿಗೆ?

ಗೊಂದಲದ ಗೂಡಾಗಿರುವ ಮನಕೆ ವಿಶ್ರಾಂತಿ ಬೇಕಿದೆ

ಬಿಡುವು ನೀಡಲೇ, ಬಿಡುವಿಲ್ಲದೆ ಬಳಿಬರುವ ಆಲೋಚನೆಗಳಿಗೆ?


ವಾಯಿದೆ ಮೀರಿದೆ ನನ್ನೆದೆಯ ಮಿಡಿತಕೆ

ಮರುಜೀವ ಕೊಡಲೇ, ದುರಸ್ತಿಯಲ್ಲಿರುವ ಭಾವನೆಗಳಿಗೆ?

ಅನುಮತಿ ಕೇಳದೆ, ಒಳಹೊಕ್ಕು ಸುಡುತಿದೆ ನಿನ್ನ ಯೊಚನೆ

ಹೊರಹಾಕಿ ಎಚ್ಚರಿಕೆಯೊಂದ ನೀಡಬಹುದೆ ನಿನಗೆ ?  


ಇಷ್ಟ ಆದ್ರೆ Like ಮಾಡಿ ನಮ್ಮನ್ನು ಪ್ರೋತ್ಸಾಹಿಸಿ...