ಗತ್ತು ಮತ್ತು ಯಾವೋನಿಗ್ ಬೇಕು?

Posted by ರಕ್ಷಿತ್ ಆಚಾರ್ on 07-Dec-2016
ಮಾತು ಮಧುರವಾಗಿರದೆ,
ನಡೆ ನಯವಾಗಿರದೆ,
ಸರ್ವರ ಸಮ್ಮುಖದಲ್ಲಿ ನೀವೂ,
ಒಬ್ಬರಾಗಿ ಮೇಳೈಸದೊಡೆ......

ಗತ್ತಿನಿಂದ ನಡೆದರೆ ಗತ್ತೇ ನಿಮ್ಮನ್ನು ಮಾತಾಡಿಸಬೇಕೇ, ಹೊರತು.
ಅಗತ್ಯವೇನಿದೆ ಅನ್ಯರಿಗೆ ನಿಮ್ಮ ಮುತ್ತಿನ, ಮಾತಿನ?

ಬಗ್ಗಿ ನಡೆದರೆ ಬೆನ್ನು ನೋಯ ಬಹುದು,
ಆದರೆ ತಲೆ ಹೋಗುವುದನ್ನು ತಪ್ಪಿಸಬಹುದಾ?

ಮಲ್ಲಿಗೆ ಅರಳಿ, ಕೈಗೆ ಸಿಕ್ಕಿ ಮುಡಿಗೆರಲು,
ಮುಗಿಲಿಗೆ ಕೈ ಚಾಚುವರೆ, ಎಟುಕದ ಚುಕ್ಕಿ-ಚಂದ್ರಮರಿಗಾಗಿ?

ನೂರಾರು ಅಂಗುಲ ಅಗಲ-ಉದ್ದ ಬೆಳೆದರೇನು, ಆಲ?
ಸುಗಂಧ ಭರಿತ ಗಂಧದ ಮರ ಬೆಳೆದರೆ ಸಾಕಲ್ಲವೇ?
ಆಲದ ಮರದ ಅಗಲಾದಷ್ಟು ಉದ್ದ.

ಸಾವಿರ ನದಿಯ ಸಂಧಿ, ಸಾಂಧ್ರತೆಯ ಸಾಗರ, ಆದರೆ.
ಬಾಯಾರಿಕೆಗೆ ಬಯಸೋದು ಸಿಹಿ ನೀರ ಚಿಕ್ಕ ತೊರೆಯ.


ಇಷ್ಟ ಆದ್ರೆ Like ಮಾಡಿ ನಮ್ಮನ್ನು ಪ್ರೋತ್ಸಾಹಿಸಿ...