shreeketh
ಈತ ಅನಿಯಮಿತ ಚಂಚಲತೆಯ ಪ್ರತಿಬಿಂಬ!! ಬಹುಶಃ ಅವನ ಆ ಚಂಚಲತೆಯೇ ಅವನ ವ್ಯಕ್ತಿತ್ವಕ್ಕೆ ಮೆರುಗು ತಂದಿಡೋದು...
ಇಂಜಿನಿಯರಿಂಗ್ ಅನ್ನೋದು ಬರೀ ರೂಢ ನಾಮ ವಾಗಿರುವಾಗಿರೋ ಕಾಲದಲ್ಲಿ, ಈತನಿಗೆ ಈ ಪದ ಅನ್ವರ್ಥನಾಮ!!. ಹಲವಷ್ಟು ತಾಂತ್ರಿಕ ವಿಷಯಗಳನ್ನು ತಲೆಯಲ್ಲಿ ತುಂಬಿಕೊಂಡು, ಮುಖದ ತುಂಬಾ ಅರಳುವ ನಗುವಿನಲ್ಲಿ ಎಲ್ಲವನ್ನೂ ಮುಚ್ಚಿಡುತ್ತಾನೆ.
ಸಹಜವಾಗಿಯೇ, ಈ ನಮ್ಮ ಇಸ್ಸನಿಗೆ ಚಂದವಾಗಿ ಜಾಲತಾಣ ನಿರ್ಮಿಸಿ, ಅಚ್ಚುಕಟ್ಟಾಗಿ ನಿರ್ವಹಿಸುತ್ತಿರೋನು ಈತ.
ಆಗಾಗ ಬರೆಯೋ ಇವನ ಬರವಣಿಗೆಯಲ್ಲಿ ಅನುಭವ ಹಾಗೂ ಬದುಕಿನೆಡೆಗಿನ ಈತನ ನಿಷ್ಪಕ್ಷಪಾತ ಹಾಗೂ ನಿಷ್ಠುರ ನಿಲುವು ಆಕರ್ಷಿಸುತ್ತೆ.
ಕ್ಷಣ ಕ್ಷಣಕ್ಕೂ ಬಣ್ಣ ಬದಲಿಸೋ ಅಂಬರ, ಬಣ್ಣವೇ ಮೈತಳೆದಂತ ಆಕಾಶದ ಕೆಳಗೆ, ಬಣ್ಣವಿಲ್ಲದೆ ಮಿಂಚುವ ಮೋಡದಿಂದ ಜಾರಿದ ಮಳೆಹನಿ ದಾರಿತಪ್ಪಿ ಇಸ್ಸನಿಯಾದಾಗ ಅಕ್ಷರದಿಂದ ಅಲಂಕರಿಸಿ ತಾಂತ್ರಿಕ ತಾಣಕ್ಕೆ ಎರಚಿದವನು ಇವನೇ...