shreeketh
ಕೆಲವ್ರಿರ್ತಾರೆ, ಅವರ ಸುತ್ತಲಿನ ವಾತಾವರಣವೇ ಚಂದ‌. ನಿಮ್ಮ ದಿನ ಹೇಗೇ ಸಾಗುತ್ತಿದ್ದರೂ, ಇಂತವರು ನಿಮ್ಮ ಸುತ್ತಮುತ್ತ ಬಂದಮೇಲೆ ನಿಮ್ಮ ಮುಖ ಖುಷಿಯಿಂದ ಅರಳುತ್ತೆ‌.
ಎಂತಹ ನೀರಸ ಸಮಯದಲ್ಲೂ ಅವರು ತಮ್ಮೊಡನೆ ತರುವ ಉತ್ಸಾಹದ ಮೋಟೆಯಲ್ಲಿ ನಿಮಗೂ ಪಾಲು ಸಿಕ್ಕಿ, ನಿಮ್ಮ ಮುಖದಲ್ಲೂ ನಗುವಿನ ನೆರಳು ಸುಳಿದಾಡುತ್ತೆ.
ಈ ಲೇಖಕ ವಿನಯ್, ಹೆಸರಿಗೆ ತಕ್ಕಂಗೆ ವಿನಯ ಸ್ವಲ್ಪ ಜಾಸ್ತಿನೇ‌! ಇವನ ಗುಣವೂ ಹಂಗೆಯ. ಇವನ ಸುತ್ತಮುತ್ತ ನಗು ಹಾಗೂ ಉತ್ಸಾಹಕ್ಕೆ ಎಂದೂ ಕಡ್ಮೆ ಇಲ್ಲ.
ಕೆಲವೊಮ್ಮೆ ಧೂರ್ತ ರಾಜಕಾರಣಿಯಂತೆ, ಮತ್ತೊಮ್ಮೆ ಕ್ರಿಕೇಟ್ ವೀಕ್ಷಕ ವಿವರಣೆಕಾರರಂತೆ ಅಥವಾ ಕೆಲವು ನಟರಂತೆ ಧ್ವನಿಯನ್ನು ಬದಲಾಯಿಸಿ, ಕೊನೆಗೆ ನಿಮ್ಮ ಹೃದಯಕ್ಕೆ ಅವನ ಬಗ್ಗೆ ಅಭಿಮಾನ ಬೆಳೆಸಿಕೊಳ್ಳದನ್ನ ಬಿಟ್ಟು ಬೇರೆ ಆಯ್ಕೆ ಇಲ್ಲದಂತೆ ಮಾಡ್ತಾನೆ‌

ತಬಲಾ ಬಾರ್ಸ್ತಾ ಅತ್ವಾ ಹಾಡು ಹೇಳ್ತನೋ, ಮುಖದಲ್ಲಿ ಅದ್ಯಾವ್ದೋ ಜನ್ಮದಲ್ಲಿನ ನೆಮ್ಮದಿಯನ್ನ ಹೊಮ್ಮಿಸುವ ಈತನ ಬರಹಗಳಲ್ಲಿ ಎದ್ದು ಕಾಣೋದು ಅದಮ್ಯ ಉತ್ಸಾಹ.

ಕೆಲವರ ಬದುಕು ನೋಡಿದ್ರೆ ಅವರ ಬರಹಕ್ಕೂ ಬದುಕಿಗೂ ಇರೋ ಬಿಡಿಸಲಾಗದ ಬಂಧ ಕಾಣತ್ತೆ‌. ಇವನ ಬರಹವನ್ನ ಓದಿದ್ರೆ ಇವನ ಬಗ್ಗೆ ತಿಳಿದಂತೆಯೇ.

ಮುಖದಲ್ಲಿ ಒಂಚೂರು ನಗುವಿನೊಂದಿಗೆ ಈತನ ಬರಹಗಳನ್ನು ಇಸ್ಸನಿಯಲ್ಲಿ ಓದಿಕೊಳ್ಳಿ‌