shreeketh
ಕೆಲವೊಮ್ಮೆ, ಕೆಲವು ಮನುಷ್ಯರನ್ನ ಗಮನಿಸಿದಾಗ, ಸುಂದರ ಕಥೆಯೊಂದು ಜೀವತಾಳಿ ಬಂದಂತಿರುತ್ತೆ! ಅವರ ಹಾವಭಾವ, ಗುಣ, ಉತ್ಸಾಹ, ನಗು, ಎಲ್ಲದಕ್ಕೂ ಒಂದು ವಿಧಾನವಿರುತ್ತೆ! ಜೀವನ ಸುಮ್ಮನೇ ಹರಿಯುವ ನದಿಯಂತೆ ಸುಂದರ ಹಾಗೂ ನಿರಂತರ ಎಂಬ ಮನವರಿಕೆ ಅಂತವರನ್ನ ನೋಡಿದ್ರೆ ಎದೆಯಾಳದಲ್ಲಿ ಪುಟಿದೇಳುತ್ತೆ!
ಇನ್ನು ಅಂತವರು ಬರ್ಯೋ ಹವ್ಯಾಸ ಇಟ್ಕೊಂಡ್ರೆ, ಅವರ ಬರಹಗಳನ್ನ ಓದೋದು, ಮಲ್ನಾಡಿನ ಭೋರ್ಗರೆವ ಮಳೆಗೆ, ಬೆಚ್ಚಗೆ ಕೂತು ಕಿಟಕಿಯಿಂದ ಹೊರಗಿನ ಮಳೆಯನ್ನೇ ಹಪ್ಪಳ ಮೆಲ್ಲುತ್ತಾ ನೋಡುವ ಅನುಭವ!

ಈಕೆ ಸೌಮ್ಯ! ಹೆಸರಿಗೆ ತಕ್ಕಂತ ವ್ಯಕ್ತಿತ್ತ್ವವಾದರೂ ತನ್ನ ವ್ಯಾಪ್ತಿಗೆ ಸೇರಿದೊಡನೆ ಪಟಪಟನೆ ಬಡಬಡಿಸುವಾಕೆ! ನಿಂತಲ್ಲೆ ಸಾವಿರಾರು ಮೈಲಿಯಾಚೆಯ ಕನಸು ಕಾಣುವಾಕೆ ಈಕೆಯ ಬರಹಗಳು ಆಕೆಯಂತೆಯೇ ಚೂಟಿ, ಉತ್ಸಾಹಿ ಹಾಗೂ ತಾಜಾ!