shreeketh
ಮಲೆನಾಡಿನ ಜಡಿ ಮಳೆ, ಹೆಂಚಿನ ದೋಣಿಯಿಂದ ಮೈಚಾಚೋ ಪುಟ್ಟ ಜಲಪಾತ, ಕದ್ದುಮುಚ್ಚಿ ಮನದಲ್ಲೆಲ್ಲೋ ಬಚ್ಚಿಟ್ಟ ಪ್ರೀತಿಗೆ ಮೈಸೋಕಿ ಜೀವ ತುಂಬೋ ಇಸ್ಸನಿಯ ಸ್ಪರ್ಶ ಇವೆಲ್ಲ ವಯೋಮಿತಿಯ ಅರಿವಿಲ್ಲದೆ ಮನಸಿಗಾಗೋ ಸಂತೋಷದ ಕ್ಷಣಗಳು. ವಯಸ್ಸು ಚಿಕ್ಕದಾದರೂ ಒಳಗಿರೋ ಮನಸ್ಸು ಸಂವೇದನೆಯ ಚಿಲುಮೆ. ಹೆಸರು ಭಾವನ ಭಟ್. ಮತ್ತೊಂದು ಮಲೆನಾಡಿನ ಸೊಗಡನ್ನು ಹೊತ್ತ ಹುಡುಗಿ. ಸದ್ಯ ಬಿ.ಕಾಮ್. ಓದ್ತಾ ಇರೋ ಈಕೆಗೆ ಸಾಹಿತ್ಯ ಮೊದಲ ಪ್ರೀತಿ. ಇವರ ಮೊದಮೊದಲ ಪ್ರೀತಿಯ ಪ್ರಯತ್ನಕ್ಕೆ ಇಸ್ಸನಿಯೊಂದು ವೇದಿಕೆ. ಓದಿ ಪ್ರೋತ್ಸಾಹಿಸಿ.