shreeketh

ಕಥೆಯಲ್ಲಿ, ಕಥೆಯು ಎಷ್ಟು ಮುಖ್ಯವೋ, ಅದನ್ನು ಹೇಳುವ ಶೈಲಿ ಅಷ್ಟೇ ಮುಖ್ಯ. ಸಂಪತ್ತುವಿನ ಕಥೆಗಳಲ್ಲಿ ಎದ್ದು ಕಾಣೋದು ಸಹ ಅದೇ ಸರಳತೆ ಹಾಗೂ ತನ್ನಂತಾನೇ ಓದಿಸಿಕೊಂಡು ಹೋಗುವ ನಿರರ್ಗಳತೆ. ಒಂದು ಕಥೆಯನ್ನು ಬರೆಯೋದಕ್ಕೂ ಮೊದಲೇ ಕತೆಗಾರ, ಅಸಂಖ್ಯಾತ ಬಾರಿ ಓದಿರುತ್ತಾನೆ ಅಂತಾರೆ.
ಅಂತಹವರ ಬಳಗಕ್ಕೆ ಸೇರ್ತಾನೆ ಇವನು.
ಅವನ ಕಥೆಗಳಿಗೆ ಅತ್ಯಂತ ಜತನದಿಂದ ಕೆಲಸ ಮಾಡಿರೋದು ಸದಾ ತೋರ್ಪಡಿಸುತ್ತದೆ.
ಕಥೆ, ಕವನ, ಭಾಷಣ, ಹಾಡು, ಕ್ರಿಕೆಟ್, ಚರ್ಚೆ, ಸಿನಿಮಾ ಹೀಗೆ ಇವನು ಮುಟ್ಟದ ಕ್ಷೇತ್ರವಿಲ್ಲ. ಇವೆಲ್ಲಕ್ಕಿಂತ ಎದ್ದು ಕಾಣೋದು ಇವನ ವ್ಯಕ್ತಿತ್ವದೊಳಗಿನ ವಿನಯ, ನಮ್ರತೆ.
ವಿದ್ಯೆಗೆ ವಿನಯವೇ ಭೂಷಣ ಅನ್ನೋದು ಸಮಾಜದಲ್ಲಿ ಇನ್ನೂ ಚಾಲ್ತಿಯಲ್ಲಿದ್ದಾಗ ಬೆಳೆದುಬಂದುದರ ಪರಿಣಾಮವಿರಬಹುದು.
ಕೈಯ್ಯಲ್ಲಿ ಘಮ್ಮೆನ್ನುವ ಕಾಫ಼ೀ, ಕತ್ತೆತ್ತಿ ಎತ್ತ ನೋಡಿದರೂ ಚೆಲ್ಲಿದಂತಿರುವ ಆಕಾಶ, ಓದಲು ಸಂಪತ್ತುವಿನ ಬರಹಗಳು, ಕೇಳಲು ನೆಲ್ಲಿಕಾಯಿ ಪೋಡ್ಕಾಸ್ಟಿನಲ್ಲಿ ಅವನದೇ ಧ್ವನಿ ... ನಿಮ್ಮನ್ನು ತಡೆಯೋರ್ಯಾರೂ ಇಲ್ಲ.!!