shreeketh
ಶಿರವ ಬೊಗಸೆಯಲಿಟ್ಟು ಒಳಬನ್ನಿ ಈ ದಾರಿಯಲ್ಲಿ ಹೆಜ್ಜೆ ಇಡುವಿರಾದರೆ, ಹಿಂಜರಿಯಬೇಡಿ, ಸಾವೇ ಬಂದರೂ' ದೇಶಕ್ಕಾಗಿ ಹೋರಾಡುವವನೇ ಧೀರ, ಛಿದ್ರ ಛಿದ್ರವಾದರೂ ಸರಿ, ದೂರ ಸರಿಯಬೇಡ. ಇದೇ ನನ್ನ ತತ್ವ ಸಿದ್ಧಾಂತ.

ನನ್ನ ಹೆಸರು ಮಹೇಶ್ ಹಿರೇಮಠ .ನಾನು ಮೂಲತಃ ಗುಲ್ಬರ್ಗಾ ಜಿಲ್ಲೆಯವನು.ಬೆಂಗಳೂರಿನ JSS ಕಾಲೇಜಿನಲ್ಲಿ ಎಂಜಿನಿಯರಿಂಗ್ ಮುಗಿಸಿ, ಇತ್ತೀಚೆಗೆ ಒಂದು ಕಂಪೇನಿಲಿ ಕೆಲಸ ಮಾಡ್ತಿದೀನಿ.
ನನಗೆ ಮೊದಲಿನಿಂದಲೂ ಸಾಹಿತ್ಯದ ಬಗ್ಗೆ ಒಲವು ಜಾಸ್ತಿ. ಅದರಲ್ಲೂ ಇತಿಹಾಸ, ದೇಶಪ್ರೇಮದ ಕುರಿತಾದ ಪುಸ್ತಕಗಳ ಮೇಲೆ ತುಂಬಾ ಪ್ರೀತಿ .ಹಾಗಾಗಿ ಮೊದಲಿನಿಂದಲೂ ದೇಶಪ್ರೇಮದ ಪುಸ್ತಕಗಳನ್ನು, ಯೋಧರ ಕಥೆಗಳನ್ನು ಓದಿಕೊಂಡು ಬೆಳೆದೆ.ಇತ್ತೀಚಿಗೆ ಲೇಖನಗಳನ್ನು ಬರೆಯೋದಕ್ಕೆ ಶುರು ಮಾಡಿದೀನಿ .ಒಂದು ಪತ್ರಿಕೆಯಲ್ಲಿ 3 ಲೇಖನಗಳನ್ನು ಬರೆದಿದ್ದೇನೆ. ಮುಂದೆಯೂ ಬರೆಯುತ್ತೇನೆ.

(ಸಾಯುವುದು ದೊಡ್ಡ ವಿಷಯವಲ್ಲ. ಯಾವುದಕ್ಕಾಗಿ ಸತ್ತೆ ಎಂಬುದರ ಮೇಲೆ ನಿನ್ನ ಬದುಕಿನ ಯಶಸ್ಸನ್ನು ಅಳೆಯಲಾಗುತ್ತದೆ. ಹುಡುಗಿ ಸಿಗಲಿಲ್ಲವೆಂದು- ಹಣ ಮಾಡಲಿಕ್ಕಾಗಲಿಲ್ಲವೆಂದು ಸತ್ತವರು ಸುದ್ದಿಯಾಗುತ್ತಾರೆ. ಇವೆಲ್ಲವನ್ನು ಮೀರಿದ ಉದ್ದೇಶವೊಂದಕ್ಕೆ ಸತ್ತ ಕೆಲವರು ಮಾತ್ರ ಇತಿಹಾಸವಾಗುತ್ತಾರೆ.