shreeketh
ಶಾರದೆಯ ಸನ್ನಿಧಿ ಶೃಂಗೇರಿಯ ವಿದ್ಯಾಭರಿತ ಮಣ್ಣಿನಿಂದ ಹೊರಹೊಮ್ಮಿರುವ ಮತ್ತೊಬ್ಬ ಪ್ರತಿಭೆ ನಾಗೇಂದ್ರ ಎ.ಆರ್. . ವಿದ್ಯಾರ್ಥಿ ದಿಸೆಯಲ್ಲಿಯೇ ಸಾಕಷ್ಟು ಪಠ್ಯೇತರ ಚಟುವಟಿಕೆಗಳಲ್ಲಿ ಭಾಗವಹಿಸಿ, ಜಿಲ್ಲಾಮಟ್ಟ-ರಾಜ್ಯಮಟ್ಟದಲ್ಲಿ ತನ್ನ ಶಾಲೆಯನ್ನು ಅನೇಕ ಸ್ಪರ್ಧೆಗಳಲ್ಲಿ ಪ್ರತಿನಿಧಿಸಿ ಪ್ರಶಸ್ತಿಗಳನ್ನು ಗಳಿಸಿರುವ ನಾಗೇಂದ್ರರವರ ನೆಚ್ಚಿನ ಕ್ಷೇತ್ರ ಭಾಷಣ ಮತ್ತು ಚರ್ಚಾಸ್ಪರ್ಧೆ. ಪ್ರಸ್ತುತ ಬಹುರಾಷ್ಟ್ರೀಯ ಕಂಪನಿಯೊಂದರಲ್ಲಿ ಉದ್ಯೋಗಿಯಾಗಿರುವ ನಾಗೇಂದ್ರರವರು ಬಿಡುವಿನ ಸಮಯದಲ್ಲಿ ಬರೆಯುವ ಲೇಖನಗಳಲ್ಲಿ ಉತ್ತಮ ಸಮಾಜದ ಬಗೆಗಿನ ಕಾಳಜಿ, ದೂರದೃಷ್ಟಿ, ಮಲೆನಾಡಿನ ಗಂಧವನ್ನು ಕಾಣಬಹುದು. ಈ ಪ್ರತಿಭಾವಂತ ಲೇಖಕರ ಕೃತಿಗೆ ವೇದಿಕೆಯಾಗಲು 'ಇಸ್ಸನಿ' ಹರ್ಷಿಸುತ್ತದೆ.