shreeketh
ಹೊಳಪು ಕಂಗಳ ಈ ಯುವಕನ ಬದುಕು ಹಾಗೂ ಜೀವನಶೈಲಿ ಅಚ್ಚುಕಟ್ಟುತನಕ್ಕೆ ಕೈಗನ್ನಡಿ. ಜೀವನದ ಮೇಲೆ ಈತನಿಗಿರುವ ಪ್ರೀತಿಯೇ ಅವನ ಬರವಣಿಗೆಯಲ್ಲಿ ಅಲ್ಲಲ್ಲಿ ಎದ್ದು ಕಾಣುತ್ತೆ.
ಭಾರತದ ಭಾವನಾತ್ಮಕ ಕ್ರೀಡೆ, ಕ್ರಿಕೆಟನ್ನು, ತಾರ್ಕಿಕವಾಗಿ ಯೋಚಿಸೋರು ವಿರಳ. ಆದರೆ ಕ್ರಿಕೇಟನ ಎಲ್ಲರಂತೆಯೇ ಹಚ್ಚಿಕೊಂಡೂ, ಆಟವನ್ನು ತರ್ಕಕ್ಕೆ ಹಚ್ಚಿ ನೋಡುವುದರಲ್ಲಿ ಈ ಸ್ಫುರದ್ರೂಪಿಯ ಸದ್ಗುಣ ಅಡಗಿದೆ.
ಬಹಳವಾಗಿ ತಪಸ್ವಿಯಂತೆ, ನಿಂತ ನೀರಿನ ದೈವಿಕ ಮೌನವೇ ಮೈತಳೆದಂತಿರುವ ಈತ, ಅರಳಿದರೆ, ಮಾತಿಗೆ, ಮಾತಿನ ಧಾಟಿಗೆ ನಿರರ್ಗಳತೆಯಿದೆ.
ಮಾಡುವ ಪ್ರತೀ ಕೆಲಸದಲ್ಲಿ ತನ್ನದೇ ಛಾಪು ಬಿಡುವುದೊಂದು ಸಹಜ ಗುಣ, ಈ ಸನ್ಯಾಸಿಯಲ್ಲದ ಸಾಧುವಿಗೆ.
ತನ್ನದೇ ಸುಂದರ ಶೈಲಿಯಲ್ಲಿ ವೇದಿಕೆಯನ್ನು ಆವರಿಸುವ ಈತನಿಗೆ ವೇದಿಕೆಯ ಬಗ್ಗೆ ಅದೇನೋ ನಂಟಿದೆ.
ಪ್ರತೀ ಕ್ಷಣ ಬದುಕುವ ಈತನ ಬದುಕಿನೆಡೆಗಿನ ದೃಷ್ಟಿ, ಪ್ರಾಯಶಃ ಅವನಿಗಿಂತಲೂ ಸುಂದರ..
ಒಂದು ನಿಶ್ಶಬ್ಧ ಸಂಜೆ, ಇನ್ನೇನು ಸುರಿಯಲಿರುವ ಮಳೆ ಹಾಗು ಈತನ ಜೋಳಿಗೆಯಿಂದ ಒಂದೆರಡು ಬರಹ...!