shreeketh
ಕುಡಿಮೀಸೆಯ ಹೊತ್ತ ಈ ಹುಡುಗನ ಹೆಸರು ಸುಧೀಕ್ಷ್. ಸದಾ ನಗುಮೊಗವ ಹೊತ್ತು ಬರುವ ಈತ, ಸುತ್ತಲಿನ ವಾತಾವರಣಕ್ಕೆ ಅದೊಂದು ವಿಶಿಷ್ಟ ಜೀವಕಳೆ ತರುವ ತರುಣ.
ದೇಶಭಕ್ತಿಯೆಂದರೆ ಸುತ್ತಲಿನ ವಿಷಯಗಳಿಗೆ ಸ್ಪಂದಿಸುವ ಭಾವನೆ, ತನ್ನ ಹತ್ತಿರದ ಸಮಾಜದಲ್ಲಿ ಸಾಧ್ಯವಾದಷ್ಟು ಧನಾತ್ಮಕ ಬದಲಾವಣೆ ತರುವುದು ಎಂದು ನಂಬಿರೊ ಈತನ ಯೋಚನಾಲಹರಿ ಹಾಗೂ ಕೃತಿಗಳಲ್ಲಿ ಎಳ್ಳಷ್ಟೂ ವ್ಯತ್ಯಾಸವಿಲ್ಲ.
ರಾಜಕೀಯ ವ್ಯವಸ್ಥೆಯ ಮೇಲೆ ದಿವ್ಯ ಅಗೌರವ ಹೊಂದಿರೊ ಈತನ ಗುರಿ ಸೈನ್ಯ, ಹಾಗೂ ಆ ನಿಟ್ಟಿನಲ್ಲಿ ಕಾರ್ಯ ಪೃವೃತ್ತನಾಗಿದ್ದಾನೆ ಸಹ.
ಜೀವಾನುಭಾವ, ದಿನನಿತ್ಯದ ಆಗುಹೋಗುಗಳನ್ನೇ ಚಂದದ ಅಕ್ಷರ ರೂಪಕ್ಕೆ ಇಳಿಸೋ ಈತನ ಬರಹಗಳನ್ನು ಇಸ್ಸನಿಯ ಅಂಗಳದಲ್ಲಿ ಓದಿಕೊಳ್ಳಿ.